ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್ಥಿಕತೆಯಲ್ಲಿ ಏಷ್ಯಾ ರಾಷ್ಟ್ರಗಳ ಪಾತ್ರ ಮಹತ್ವದ್ದು: ಶರ್ಮಾ (Anand Sharma | Global economic | Western countries | Asian economies)
Bookmark and Share Feedback Print
 
ಜಾಗತಿಕ ಆರ್ಥಿಕ ಸುಸ್ಥಿತಿಗೆ ಮರಳುವಲ್ಲಿ ಏಷ್ಯಾದ ರಾಷ್ಟ್ರಗಳು ಮಹತ್ತರ ಪಾತ್ರ ವಹಿಸಿವೆ. ಭಾರತ ಸೇರಿದಂತೆ ಇತರ ಕೆಲ ರಾಷ್ಟ್ರಗಳು ಸಂಪೂರ್ಣ ಕುಸಿತ ಕಂಡಿಲ್ಲ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಚಿವ ಆನಂದ್ ಶರ್ಮಾ ಹೇಳಿದ್ದಾರೆ.

ಜಾಗತಿಕ ಆರ್ಥಿಕತೆ ಬಿಕ್ಕಟ್ಟಿನಲ್ಲಿರುವಾಗ ಏಷ್ಯಾದ ರಾಷ್ಟ್ರಗಳ ಆರ್ಥಿಕ ವೃದ್ಧಿ ದರ ಶೇ.9.5ರಿಂದ ಶೇ.6.7ಕ್ಕೆ ಇಳಿಕೆ ಕಂಡಿತ್ತು.ಆದರೆ ಆರ್ಥಿಕತೆ ಸಂಪೂರ್ಣವಾಗಿ ಕುಸಿತ ಕಂಡಿಲ್ಲ.ಆರ್ಥಿಕತೆ ಸುಸ್ಥಿತಿಗೆ ಬರುವಲ್ಲಿ ಕೂಡಾ ಏಷ್ಯಾ ರಾಷ್ಟ್ರಗಳು ಮಹತ್ತರ ಪಾತ್ರವಹಿಸಿವೆ ಎಂದು ಶರ್ಮಾ ತಿಳಿಸಿದ್ದಾರೆ.

ಉದಯೋನ್ಮುಖ ರಾಷ್ಟ್ರಗಳಿಂದ ಜಾಗತಿಕ ಆರ್ಥಿಕತೆ ಸುಸ್ಥಿತಿಗೆ ಬರುತ್ತಿದೆ ಎನ್ನುವುದರಲ್ಲಿ ಸತ್ಯವಿದೆ.ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಅರ್ಧಕ್ಕಿಂತ ಹೆಚ್ಚು ಆರ್ಥಿಕತೆ ಸುಸ್ಥಿತಿಗೆ ಮರಳಿದೆ ಎಂದು ಶರ್ಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ