ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸತ್ಯಂ:ರಾಜು ವೈದ್ಯಕೀಯ ವರದಿ ಸಲ್ಲಿಸಲು ನ್ಯಾಯಾಲಯ ಆದೇಶ (Satyam scam | B Ramalinga Raju | Hepatitis-C | CBI | Special court)
Bookmark and Share Feedback Print
 
ಸತ್ಯಂ ಕಂಪ್ಯೂಟರ್ ಸರ್ವಿಸಸ್‌ನ ಬಹುಕೋಟಿ ಹಗರಣದ ಪ್ರಮುಖ ರೂವಾರಿ ಬಿ.ರಾಮಲಿಂಗಾರಾಜು ಹೆಪಾಟಿಟಿಸ್-ಸಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆ ಅಥವಾ ಬೇಡವೋ ಎನ್ನುವ ಕುರಿತಂತೆ ವೈದ್ಯರಿಂದ ಪಡೆದ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶಿಸಿದೆ.

7100 ಕೋಟಿ ರೂಪಾಯಿಗಳ ಹಗರಣದ ವಿಚಾರಣೆ ನಡೆಸುತ್ತಿರುವ ವಿಶೇಷ ನ್ಯಾಯಾಲಯ, ಸಿಬಿಐ ಪ್ರಕರಣದಲ್ಲಿ ದಾಖಲಿಸಿದ ಎಲ್ಲಾ ಆರೋಪಿಗಳ ವಿಚಾರಣೆ ನಡೆಸುತ್ತಿದೆ ಎಂದು ನ್ಯಾಯಾಲಯದ ಮೂಲಗಳು ತಿಳಿಸಿವೆ.

ಆದರೆ, ಹಗರಣದ ಪ್ರಮುಖ ಆರೋಪಿ ಬಿ.ರಾಮಲಿಂಗಾ ರಾಜು, ನಿಜಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ, ಮತ್ತೊಮ್ಮೆ ನ್ಯಾಯಾಲಯದ ಮುಂದೆ ಹಾಜರಾಗುವಲ್ಲಿ ವಿಫಲರಾಗಿದ್ದಾರೆ.

ವಿಶೇಷ ನ್ಯಾಯಾಧೀಶರಾದ ಬಿ.ವಿಎಲ್‌ಎನ್ ಚಕ್ರವರ್ತಿ,ಆರೋಪಿಯ ಆರೋಗ್ಯದ ಸ್ಥಿತಿಯ ಬಗ್ಗೆ ರಾಜು ಪರ ವಕೀಲರಿಗೆ ಕೇಳಿದಾಗ,ಪ್ರಸ್ತುತ ಅವರ ದೈಹಿಕ ಸ್ಥಿತಿಯ ಬಗ್ಗೆ ನನಗೆ ಸಂಪೂರ್ಣ ವಿವರಗಳು ಲಭ್ಯವಿಲ್ಲ ಎಂದು ಹೇಳಿದ್ದಾರೆ.

ತದ ನಂತರ ನ್ಯಾಯಾಧೀಶರು,ನಿಜಾಮ್ ಆಸ್ಪತ್ರೆಯ ನಿರ್ದೇಶಕರು ರಾಮಲಿಂಗಾರಾಜು ಆರೋಗ್ಯದ ಬಗ್ಗೆ ಸಂಪೂರ್ಣ ವಿವರಗಳನ್ನು ನ್ಯಾಯಾಲಯಕ್ಕೆ ಒದಗಿಸಬೇಕು ಎಂದು ಆದೇಶಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ