ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಪ್ರಿಲ್ 10 ರಂದು ಚೀನಾದಿಂದ ಗೂಗಲ್ ನಿರ್ಗಮನ (Google | China | Media)
Bookmark and Share Feedback Print
 
ಸೆನ್ಸಾರ್ ಶಿಪ್ ಮತ್ತು ಹ್ಯಾಕಿಂಗ್ ವಿವಾದಗಳ ಹಿನ್ನೆಲೆಯಲ್ಲಿ ಅಮೆರಿಕ ಮೂಲದ ಅಂತರ್ಜಾಲ ವಹಿವಾಟಿನ ಗೂಗಲ್ ಸಂಸ್ಥೆ, ಮುಂದಿನ ತಿಂಗಳ ಅವಧಿಯಲ್ಲಿ ಚೀನಾದಲ್ಲಿನ ವಹಿವಾಟು ಸ್ಥಗಿತಗೊಳಿಸಲಿದೆ. ಮುಂಬರುವ ದಿನಗಳಲ್ಲಿ ಭವಿಷ್ಯದ ವಹಿವಾಟು ಕುರಿತಂತೆ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ಮುಂಬರುವ ಏಪ್ರಿಲ್ 10 ರೊಳಗಾಗಿ ಚೀನಾದ ವಹಿವಾಟು ಸ್ಥಗಿತಗೊಳಿಸುವ ಬೆದರಿಕೆ ಒಡ್ಡಿದೆ. ಆದರೆ ವಹಿವಾಟು ಸ್ಥಗಿತಗೊಳಿಸುವ ಬಗ್ಗೆ ಖಚಿತ ಮಾಹಿತಿ ನೀಡಿಲ್ಲವೆಂದು ಗೂಗಲ್ ಕಂಪೆನಿಯ ಪಾಲುದಾರ ಕಂಪೆನಿಯಾದ ಚೀನಾದ ಜಾಹೀರಾತು ಏಜೆನ್ಸಿಯ ಅನಾಮಧೇಯ ಅಧಿಕಾರಿಗಳು ಚೀನಾದ ಬಿಜಿನೆಸ್ ನ್ಯೂಸ್‌ಗೆ ಮಾಹಿತಿ ನೀಡಿದ್ದಾರೆ ಎಂದು ಮಾಧ್ಯಮಗಳು ಪ್ರಕಟಿಸಿವೆ.

ಆದರೆ ವರದಿಯಲ್ಲಿ ಗೂಗಲ್ ಸಂಸ್ಥೆ ಚೀನಾದಲ್ಲಿರುವ ಸಂಪೂರ್ಣ ವಹಿವಾಟು ಸ್ಥಗಿತಗೊಳಿಸುವುದೋ ಅಥವಾ ಭಾಗಾಂಶ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದೋ ಎನ್ನುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲವೆಂದು ಮೂಲಗಳು ತಿಳಿಸಿವೆ.

ಗೂಗಲ್‌ ಸಂಸ್ಥೆಯ ಅನಾಮಧೇಯ ಸಿಬ್ಬಂದಿ ಪ್ರಕಾರ, ಗೂಗಲ್ ಕಂಪೆನಿ ಸೋಮವಾರದಂದು ಚೀನಾದಿಂದ ವಹಿವಾಟು ಸ್ಥಗಿತಗೊಳಿಸುವ ಬಗ್ಗೆ ಘೋಷಿಸಲಿದ್ದು, ಹಾಗೂ ಸ್ಥಳೀಯ ಸಿಬ್ಬಂದಿಗಳಿಗೆ ಪರಿಹಾರವನ್ನು ಘೋಷಿಸಲಿದೆ ಎಂದು ತಿಳಿಸಿದ್ದಾರೆ.

ಚೀನಾದ ಗೂಗಲ್‌ನ ವಕ್ತಾರರಾದ ಮಾರ್ಷಾ ವಾಂಗ್, ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದು, ಕಂಪೆನಿಯ ಸ್ಥಿತಿಗತಿಯ ಬಗ್ಗೆ ಸಂಪೂರ್ಣ ವರದಿಗಳು ಲಭ್ಯವಾಗಿಲ್ಲ ಎಂದು ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೂಗಲ್, ಚೀನಾ, ಮಾಧ್ಯಮ