ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಲ್‌ಆಂಡ್ ಟಿ ತೆಕ್ಕೆಗೆ 1400 ಕೋಟಿ ರೂಪಾಯಿ ಗುತ್ತಿಗೆ (Larsen & Toubro | Construction firm | NHAI | L&T | Bombay Stock Exchange)
Bookmark and Share Feedback Print
 
ರಸ್ತೆ ನಿರ್ಮಾಣ ಅಭಿವೃದ್ದಿಗಾಗಿ ನ್ಯಾಷನಲ್ ಹೈವೇ ಅಛಾರಿಟಿ ಆಫ್ ಇಂಡಿಯಾದಿಂದ 1,400 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆಯಲಾಗಿದೆ ಎಂದು ಕಟ್ಟಡ ನಿರ್ಮಾಣ ಹಾಗೂ ಇಂಜಿನಿಯರಿಂಗ್ ದೈತ್ಯ ಸಂಸ್ಥೆ ಲಾರ್ಸನ್‌ ಆಂಡ್ ಟೌಬ್ರೊ ಹೇಳಿಕೆ ನೀಡಿದೆ.

ಎಲ್‌ ಆಂಡ್ ಟಿ ಸಮಾಖೈಯಾಲಿ ಗಾಂಧಿಧಾಮ ಟೋಲ್‌ವೇಯಿಂದ 6 ಲೇನ್ ರಸ್ತೆಗಳ ನಿರ್ಮಾಣಕ್ಕಾಗಿ 1400 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದಿದೆ ಎಂದು ಲಾರ್ಸನ್ ಟೌಬ್ರೊ ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಕಟ್ಟಡ ನಿರ್ಮಾಣ, ಮೇಲ್ವಿಚಾರಣೆ ವಿನ್ಯಾಸಕ್ಕಾಗಿ ಒಟ್ಟು 1400 ಕೋಟಿ ರೂಪಾಯಿಗಳ ಅಂದಾಜು ಮಾಡಲಾಗಿದೆ.ಯೋಜನೆಯ ಮುಕ್ತಾಯಕ್ಕಾಗಿ 30 ತಿಂಗಳುಗಳ ಅವಧಿಯನ್ನು ನಿಗದಿಪಡಿಸಲಾಗಿದೆ ಎಂದು ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಕಂಪೆನಿ ಬಹಿರಂಗಪಡಿಸಿದೆ.

ಲಾರ್ಸನ್ ಆಂಡ್ ಟೌಬ್ರೊ ಕಂಪೆನಿ ಪ್ರಸ್ತುತ ದೇಶದಲ್ಲಿ 13 ಬೃಹತ್ ರಸ್ತೆ ಯೋಜನೆಗಳ ಹೊಣೆಯನ್ನು ಹೊತ್ತುಕೊಂಡಿದೆ.

ಮುಂಬೈ ಶೇರುಪೇಟೆಯಲ್ಲಿ ಎಲ್‌ ಆಂಡ್ ಟಿ ಶೇರುಗಳು ತಲಾ ಶೇರಿಗೆ ಶೇ.0.36ರಷ್ಟು ಏರಿಕೆಯಾಗಿ 1,623 ಕೋಟಿ ರೂಪಾಯಿಗಳಿಗೆ ತಲುಪಿದೆ
ಸಂಬಂಧಿತ ಮಾಹಿತಿ ಹುಡುಕಿ