ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ತೆರಿಗೆ ಮುಕ್ತ ಗೋಧಿ ಅಮುದಿಗೆ ಸರಕಾರ ಸಮ್ಮತಿ (Tax-free wheat imports India | Ministerial panel | Food ministry)
Bookmark and Share Feedback Print
 
ದರ ಏರಿಕೆ ನಿಯಂತ್ರಣ ಹಾಗೂ ಸರಬರಾಜು ವ್ಯವಸ್ಥೆಗೆ ಚೇತರಿಕೆ ನೀಡಲು ತೆರಿಗೆ ಮುಕ್ತ ಗೋಧಿಯನ್ನು ಅಮುದು ಮಾಡಿಕೊಳ್ಳಲು ಕೇಂದ್ರದ ಸಚಿವ ಸಂಪುಟ ಸಮಿತಿ ಸಮ್ಮತಿ ಸೂಚಿಸಿದೆ ಎಂದು ಕೃಷಿ ಮತ್ತು ಅಹಾರ ಖಾತೆ ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತೆರಿಗೆ ಮುಕ್ತ ಗೋಧಿಯನ್ನು ಅಮುದಿಗೆ ಮಾರ್ಚ್ 31ರಂದು ಕೊನೆಯ ದಿನವೆಂದು ಕೇಂದ್ರ ಸರಕಾರ ಕಳೆದ ವರ್ಷದ ಬಜೆಟ್ ಮಂಡನೆಯ ಸಂದರ್ಭದಲ್ಲಿ ಘೋಷಿಸಿತ್ತು. ಆದರೆ ಪ್ರಸ್ತುತ ಸರಕಾರ ಗಡುವನ್ನು ವಿಸ್ತರಿಸುವ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಸಚಿವ ಸಂಪುಟ ಸಮಿತಿ 650,000 ಮೆಟ್ರಿಕ್ ಟನ್‌ ಗೋಧಿಯನ್ನು ಅಮುದು ಮಾಡಿಕೊಳ್ಳಲು ಅನುಮತಿ ನೀಡಿದೆ ಎಂದು ಅನಾಮಧೇಯ ಅದಿಕಾರಿಗಳು ತಿಳಿಸಿದ್ದಾರೆ.

ಭಾರತದ ರಫ್ತು ವಹಿವಾಟುದಾರರು ಕೇವಲ50,000-60,000 ಟನ್‌ಗಳಷ್ಟು ಗೋಧಿಯನ್ನು ಅಮುಧು ಮಾಡಿಕೊಳ್ಳುವ ಸಾಮರ್ಥ್ಯವಿದೆ ಎಂದು ರಫ್ತು ವಹಿವಾಟಿನ ಅಧಿಕಾರಿಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ