ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕೇಂದ್ರ ಸರಕಾರಿ ನೌಕರರ ಶೇ.8ರಷ್ಟು ಡಿಎ ಹೆಚ್ಚಳ (Hike | DA | central staff)
Bookmark and Share Feedback Print
 
ಪ್ರಮುಖ ಬೆಳವಣಿಗೆಯೊಂದರಲ್ಲಿ ಕೇಂದ್ರದ ಸಚಿವ ಸಂಪುಟ ಸಮಿತಿ , ಕೇಂದ್ರ ಸರಕಾರಿ ನೌಕರರಿಗೆ ಹಾಗೂ ನಿವೃತ್ತಿ ಹೊಂದಿದ ನೌಕರರಿಗೆ ಇನ್ನಿತರ ಭತ್ಯೆಯಲ್ಲಿ ಶೇ.8ರಷ್ಟು ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.

ಕೇಂದ್ರ ಸರಕಾರದ ನಿರ್ಧಾರದಿಂದಾಗಿ ಸುಮಾರು 50 ಲಕ್ಷ ಕೇಂದ್ರ ಸರಕಾರದ ಉದ್ಯೋಗಿಗಳು ನಿರಳವಾಗಿದ್ದು, ದರ ಏರಿಕೆ ಮತ್ತು ಹಣದುಬ್ಬರದಿಂದ ಎದುರಾದ ಸಮಸ್ಯೆಗಳಿಗೆ ಅಲ್ಪ ನೆಮ್ಮದಿ ದೊರೆತಂತಾಗಿದೆ.

ಕೇಂದ್ರದ ಸಚಿವ ಸಂಪುಟ ಸಮಿತಿ, ಮುಂದಿನ ವರ್ಷದ ಜನೆವರಿ 1ರಿಂದ ಇನ್ನಿತರ ಭತ್ಯೆ ಹೆಚ್ಚಳ ಜಾರಿಗೆ ಬರಲಿದೆ ಎಂದು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ.

ಪ್ರಸ್ತುತ ಮೂಲವೇತನದಲ್ಲಿ ಶೇ.27ರಷ್ಟು ಇನ್ನಿತರ ಭತ್ಯೆಗೆ ಮೀಸಲಾಗಿರಿಸಲಾಗಿತ್ತು ಎಂದು ಪ್ರಧಾನಮಂತ್ರಿ ನೇತೃತ್ವದ ಸಭೆಯ ನಂತರ ಸಚಿವೆ ಅಂಬಿಕಾ ಸೋನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೇಂದ್ರ ಸರಕಾರಿ ನೌಕರರ ಇನ್ನಿತರ ಭತ್ಯೆಯಲ್ಲಿ ಶೇ.8ರಶ್ಟು ಹೆಚ್ಚಳ ಘೋಷಿಸುವುದರಿದ ಸರಕಾರಕ್ಕೆ ವಾರ್ಷಿಕವಾಗಿ 6,969.36 ಕೋಟಿ ರೂಪಾಯಿಗಳ ಹೊರೆಯಾಗಲಿದೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ