ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವರ್ಷಾಂತ್ಯಕ್ಕೆ ವಿದ್ಯುತ್‌ಚಾಲಿತ ಕಾರು ಬಿಡುಗಡೆ:ಜಿಎಂ (General Motors | Spark | Electric version | Indian market | E-Spark)
Bookmark and Share Feedback Print
 
ವಾಹನೋದ್ಯಮ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಜನರಲ್ ಮೋಟಾರ್ಸ್ ಸಂಸ್ಥೆ, ಪ್ರಸಕ್ತ ವರ್ಷಾಂತ್ಯಕ್ಕೆ ಭಾರತೀಯ ಮಾರುಕಟ್ಟೆಯಲ್ಲಿ ವಿದ್ಯುತ್‌ಚಾಲಿತ ಸಣ್ಣ ಕಾರು ಬಿಡುಗಡೆ ಮಾಡಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ನಾವು ವಿದ್ಯುತ್‌ಚಾಲಿತ ಕಾರನ್ನು ಮಾರುಕಟ್ಟೆ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಇ-ಸ್ಪಾರ್ಕ್ ಮಾಡೆಲ್ ಕಾರನ್ನು ಪ್ರಸಕ್ತ ವರ್ಷಾಂತ್ಯಕ್ಕೆ ಮಾರುಕಟ್ಟೆಯನ್ನು ಪ್ರವೇಶಿಸಲಿದೆ ಎಂದು ಜನರಲ್ ಮೋಟಾರ್ಸ್‌ನ ಮಾರುಕಟ್ಟೆ ನಿರ್ದೇಶಕ ಗೌರವ್ ಗುಪ್ತಾ ತಿಳಿಸಿದ್ದಾರೆ.

ವಿದ್ಯುತ್‌ಚಾಲಿತ ಸಣ್ಣಕಾರು 'ಸ್ಪಾರ್ಕ್' ವಿಶ್ವದ ವಾಹನೋದ್ಯಮ ಕ್ಷೇತ್ರದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದು, ನಾಲ್ಕು ಬಾಗಿಲುಗಳುಳ್ಳ ಪ್ರಯಾಣಿಕ ಕಾರು ಇದಾಗಿದೆ ಎಂದು ಹೇಳಿದ್ದಾರೆ.

ಇ-ಸ್ಪಾರ್ಕ್ ಕಾರು, ಸ್ಪಾರ್ಕ್ ಕಾರಿಗಿಂತ ದರದಲ್ಲಿ ಅಲ್ಪ ಹೆಚ್ಚಳವಾಗಲಿದೆ ಎಂದು ಮಾರುಕಟ್ಟೆ ನಿರ್ದೇಶಕ ಗುಪ್ತಾ ತಿಳಿಸಿದ್ದಾರೆ.

ಇ-ಸ್ಪಾರ್ಕ್ ಕಾರು ಖರೀದಿಯ ದರದಲ್ಲಿ ಅಲ್ಪ ವೆಚ್ಚವಾಗಿದ್ದರೂ ಮೇಲ್ವಿಚಾರಣೆ ವೆಚ್ಚ ಕಡಿಮೆಯಾಗಲಿದೆ. ಲಘು ವಾಣಿಜ್ಯ ವಾಹನಗಳ ಕ್ಷೇತ್ರವನ್ನು ಜನರಲ್ ಮೋಟಾರ್ಸ್ ಪ್ರವೇಶಿಸುತ್ತಿದೆ ಎಂದು ಗುಪ್ತಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ