ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್‌ಬಿಐಯಿಂದ ರೆಪೋ ದರಗಳಲ್ಲಿ ಹೆಚ್ಚಳ (RBI | Interest rates | key rates | Loans)
Bookmark and Share Feedback Print
 
ದೇಶದ ಆರ್ಥಿಕತೆ ಸುಸ್ಥಿತಿಗೆ ಮರಳುತ್ತಿರುವುದರಿಂದ ಹಾಗೂ ಹಣದುಬ್ಬರ ಏರಿಕೆಯ ಹಿನ್ನೆಲೆಯಲ್ಲಿ, ಭಾರತೀಯ ರಿಸರ್ವ್ ಬ್ಯಾಂಕ್ ಅನಿರೀಕ್ಷಿತವಾಗಿ ರೆಪೋ ದರಗಳಲ್ಲಿ ಹೆಚ್ಚಳಗೊಳಿಸಿ ಆದೇಶ ಹೊರಡಿಸಿದೆ.

ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳಿಗೆ ನೀಡಲಾಗುವ ಸಾಲದ ಬಡ್ಡಿದರದಲ್ಲಿ ಶೇ.4.75ರಿಂದ ಶೇ.5ರಷ್ಟು ರೆಪೋ ದರವನ್ನು ಹೆಚ್ಚಳಗೊಳಿಸಿದೆ. ರಿವರ್ಸ್ ರೆಪೋ ದರಗಳಲ್ಲಿ ಶೇ.3.25ರಿಂದಶೇ.3.50ಕ್ಕೆ ಏರಿಕೆ ಮಾಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.

ಮುಂಬರುವ ಏಪ್ರಿಲ್ 20ರಂದು ಆರ್ಥಿಕ ಪರಿಷ್ಕರಣೆ ಸಮಯದಲ್ಲಿ ಆರ್‌ಬಿಐ 50 ಬೇಸಿಸ್ ಪಾಯಿಂಟ್‌ಗಳಷ್ಟು ಬಡ್ಡಿ ದರದಲ್ಲಿ ಹೆಚ್ಚಳಗೊಳಿಸುವ ಸಾಧ್ಯತೆಗಳಿವೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹಣದುಬ್ಬರ ನಿರಂತರ ಏರಿಕೆ ಕಂಡ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಬಡ್ಡಿ ದರದಲ್ಲಿ ಏರಿಕೆ ಘೋಷಿಸಿದೆ.ಅಹಾರ ದರಗಳ ಏರಿಕೆ ಕಳವಳಕ್ಕೆ ಕಾರಣವಾಗಿಲ್ಲ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮುಖ್ಯ ಆರ್ಥಿಕ ತಜ್ಞ ಅಭಿಕ್ ಬರುವಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ