ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಸ್ಟೆಕ್ಟ್ರಂಗಾಗಿ 9 ಟೆಲಿಕಾಂ ಕಂಪೆನಿಗಳು (Auction|3G|DoT|spectrum|2G)
Bookmark and Share Feedback Print
 
3ಜಿ ತರಂಗಾಂತಗಳ ಹರಾಜು ಏಪ್ರಿಲ್ 9 ರಂದು ನಡೆಯಲಿದ್ದು,ಒಂಬತ್ತು ಟೆಲಿಕಾಂ ಕಂಪೆನಿಗಳು ಭಾಗವಹಿಸಲಿವೆ ಎಂದು ಟೆಲಿಕಾಂ ಇಲಾಖೆಯ ಮೂಲಗಳು ತಿಳಿಸಿವೆ.

ಟೆಲಿಕಾಂ ಇಲಾಖೆ ವೈರ್‌ಲೆಸ್ ಬ್ರಾಡ್‌ಬ್ಯಾಂಡ್ ಸೇವೆಗಳಿಗಾಗಿ, ಈಗಾಗಲೇ 11 ಅರ್ಜಿಗಳನ್ನು ಸ್ವೀಕರಿಸಲಿದ್ದು, ಒಟ್ಟು 20 ಅರ್ಜಿಗಳ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏರ್‌ಸೆಲ್, ಭಾರ್ತಿಏರ್‌ಟೆಲ್, ಐಡಿಯಾ, ರಿಲಯನ್ಸ್ ಟೆಲಿಕಾಂ,ಎಸ್‌ ಟೆಲ್, ಟಾಟಾ ಟೆಲಿ ಸರ್ವಿಸಸ್, ವೋಡಾಫೋನ್ ಮತ್ತು ವಿಡಿಯೋಕಾನ್ ಟೆಲಿಕಾಂ ಸಂಸ್ಥೆಗಳು 3ಜಿ ತರಂಗಾಂತರಗಳಿಗಾಗಿ ಬಿಡ್ ಸಲ್ಲಿಸಿವೆ.

3ಜಿ ತರಂಗಾಂತರಗಳಿಗಾಗಿ ನೂತನ ಜಾಗತಿಕ ಕಂಪೆನಿಗಳಾದ ಆಗುರೆ, ಟಿಕೊನಾ ವೈರ್‌ಲೆಸ್,ಇನ್ಫೋಟೆಲ್ ಬ್ರಾಡ್‌ಬ್ಯಾಂಡ್ ಸರ್ವಿಸಸ್ ಮತ್ತು ಕುವ್ಲಾ ಕಾಮ್ ಕಂಪೆನಿಗಳು ಭಾಗವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: 3ಜಿ ಸ್ಪೆಕ್ಟ್ರಂ, ಹರಾಜು, ಬಿಡ್, 2ಜಿ