ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೀಘ್ರದಲ್ಲಿ ಬಡ್ಡಿ ದರ ಏರಿಕೆ ಸಾಧ್ಯತೆ:ಎಸ್‌ಬಿಐ (SBI | ICICI Bank | Market | RBI | lending rates)
Bookmark and Share Feedback Print
 
ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರಗಳಲ್ಲಿ ಅನಿರೀಕ್ಷಿತವಾಗಿ ಏರಿಕೆ ಘೋಷಿಸಿದ ಹಿನ್ನೆಲೆಯಲ್ಲಿ,ದೇಶದ ಸರಕಾರಿ ಸ್ವಾಮ್ಯದ ಅಗ್ರ ಬ್ಯಾಂಕ್ ಎಸ್‌ಬಿಐ ಕೂಡಾ ಬಡ್ಡಿ ದರದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಬ್ಯಾಂಕ್‌ಗಳು ಮೂಲಗಳು ತಿಳಿಸಿವೆ.

ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರಗಳನ್ನು ಹೆಚ್ಚಿಸಿದ್ದರಿಂದ, ನಗದುಹಣದ ಒಳಹರಿವಿನಲ್ಲಿ ಕೊರತೆಯಾಗಲಿದೆ ಎಂದು ಎಸ್‌ಬಿಐ ಮುಖ್ಯ ಆರ್ಥಿಕ ಅಧಿಕಾರಿ ಎಸ್‌.ಎಸ್.ರಂಜನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಆರ್‌ಬಿಐ ಶುಕ್ರವಾರದಂದು ರೆಪೋ ದರಗಳಲ್ಲಿ ಶೇ.0.25ರಿಂದ ಶೇ.0.5ರಷ್ಟು ಹಾಗೂ ರಿವರ್ಸ್ ರೆಪೋ ದರಗಳಲ್ಲಿ ಶೇ.3.5ರಷ್ಟು ಏರಿಕೆಗೊಳಿಸಿದೆ. ಮುಂಬರುವ ಏಪ್ರಿಲ್ 20 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಆರ್ಥಿಕ ಪರಿಷ್ಕರಣೆಯಲ್ಲಿ ಮತ್ತಷ್ಟು ಬಡ್ಡಿ ದರಗಳಲ್ಲಿ ಹೆಚ್ಚಳಗೊಳಿಸುವ ಸಾಧ್ಯತೆಗಳಿವೆ.

ಬಡ್ಡಿದರಗಳನ್ನು ಹೆಚ್ಚಳಗೊಳಿಸುವ ಮುನ್ನ ಮಾರುಕಟ್ಟೆಯ ಸ್ಥಿತಿಗತಿಯನ್ನು ಪರಿಶೀಲಿಸಲಿದೆ ಎಂದು ಐಸಿಐಸಿಐ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದಾ ಕೋಚರ್ ತಿಳಿಸಿದ್ದಾರೆ.

ಪ್ರಸ್ತುತ ಮಾರುಕಟ್ಟೆಯ ನಗದುಹರಿವು ಹೇರಳವಾಗಿದೆ.ಸಾಲದ ಪ್ರಮಾಣದ ಬೆಳವಣಿಗಗಳನ್ನು ಗಮನಿಸಿ, ಬಡ್ಡಿ ದರ ಏರಿಕೆಯ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಕೋಚರ್ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ