ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತಕ್ಕೆ ಎರಡಂಕಿ ಜಿಡಿಪಿ ದರದ ಸಾಮರ್ಥ್ಯವಿದೆ:ಅಂಬಾನಿ (Mukesh Ambani | RIL | Economic growth | Ramakrishna Bajaj)
Bookmark and Share Feedback Print
 
ಭಾರತಕ್ಕೆ ದೀರ್ಘಾವಧಿಯ ಮತ್ತು ಸ್ಥಿರ ಎರಡಂಕಿ ಆರ್ಥಿಕ ವೃದ್ಧಿ ದರದ ಗುರಿಯನ್ನು ತಲುಪುವ ಸಾಧ್ಯತೆಗಳಿವೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.

ದೇಶದ ಯುವಶಕ್ತಿ ಹಾಗೂ ಸಾಮರ್ಥ್ಯದಿಂದಾಗಿ ಅಭಿವೃದ್ಧಿಯಲ್ಲಿ ಚೇತರಿಕೆ ಕಾಣುತ್ತಿದೆ.ಭಾರತಕ್ಕೆ ದೀರ್ಘಾವಧಿಯ ಮತ್ತು ಸ್ಥಿರ ಎರಡಂಕಿ ಆರ್ಥಿಕ ವೃದ್ಧಿ ದರದ ಗುರಿಯನ್ನು ತಲುಪುವುದರಲ್ಲಿ ಯಾವುದೇ ಶಂಕೆ ವ್ಯಕ್ತವಾಗಿಲ್ಲ ಎಂದು ಅಂಬಾನಿ ತಿಳಿಸಿದ್ದಾರೆ.

ಭಾರತದ ಅಭಿವೃದ್ಧಿಯನ್ನು ಗುಣಮಟ್ಟದ ಆಧಾರದ ಮೇಲೆ ವರ್ಣಿಸಲಾಗುತ್ತಿದೆ.ಆರ್ಥಿಕ ವೃದ್ಧಿ ದರ ಶೇ.8-9ಕ್ಕೆ ತಲುಪುತ್ತಿರುವ ಹಿನ್ನೆಲೆಯಲ್ಲಿ ಗುಣಮಟ್ಟದತ್ತ ವಿಷಯಗಳತ್ತ ಗಮನಹರಿಸಬೇಕಾಗಿದೆ. ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ದೇಶಕ್ಕೆ ಶಿಕ್ಷಣದ ಗುಣಮಟ್ಟಯನ್ನು ಅಭಿವೃದ್ಧಿಗೊಳಿಸುವ ಅಗತ್ಯವಿದೆ.ಉತ್ತಮ ಗುಣಮಟ್ಟದ ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ. ರಿಲಯನ್ಸ್ ಫೌಂಡೇಶನ್ ಸಂಸ್ಥೆ, ಜಾಗತಿಕ ಮಟ್ಟದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ನಿರ್ಧರಿಸಿದೆ ಎಂದು ಅಂಬಾನಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ