ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 5 ವರ್ಷಗಳಲ್ಲಿ 60ಸಾ.ಕೋ ತಲುಪಲಿರುವ ಚಿತ್ರೋದ್ಯಮ (Indian film | Television Industry | PricewaterhouseCoopers)
Bookmark and Share Feedback Print
 
ಪ್ರೇಕ್ಷಕರ ಸಂಖ್ಯೆಯಲ್ಲಿ ಹೆಚ್ಚಳ ಹಾಗೂ ಅಂತಾರಾಷ್ಟ್ರಯ ಚಲನಚಿತ್ರಗಳಿಗೆ ವಿಸ್ತಾರವಾಗುತ್ತಿರುವ ಮಾರುಕಟ್ಟೆಯಿಂದಾಗಿ ಭಾರತದ ಸಿನೆಮಾ ಮತ್ತು ಟೆಲಿವಿಜನ್ ಉದ್ಯಮ ಕ್ಷೇತ್ರ ಮುಂದಿನ ಐದು ವರ್ಷಗಳಲ್ಲಿ 60,ಸಾವಿರ ಕೋಟಿ ರೂಪಾಯಿಗೆ ತಲುಪುವ ನಿರೀಕ್ಷೆಯಿದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.

ಪ್ರೈಸ್ ವಾಟರ್‌ಹೌಸ್ ಕೂಪರ್ಸ್ ಲೆಕ್ಕಪರಿಶೋಧಕ ಸಂಸ್ಥೆಯ ಪ್ರಕಾರ ಭಾರತದ ಚಿತ್ರೋದ್ಯಮ ಹಾಗೂ ಟೆಲಿವಿಜನ್ ಕ್ಷೇತ್ರದ ವಹಿವಾಟು 2008-09ರ ಅವಧಿಯಲ್ಲಿ 35 ಸಾವಿರ ಕೋಟಿ ರೂಪಾಯಿಗಳಾಗಿದ್ದು, ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ 1.8 ಮಿಲಿಯನ್ ಜನತೆಗೆ ಉದ್ಯೋಗವನ್ನು ನೀಡಿದೆ. ದೇಶದ ಆರ್ಥಿಕತೆಯಲ್ಲಿ ವಾರ್ಷಿಕವಾಗಿ 28,305 ಕೋಟಿ ರೂಪಾಯಿ ಪಾಲನ್ನು ಹೊಂದಿದೆ.

ಮುಂಬರುವ ಐದು ವರ್ಷಗಳಲ್ಲಿ ದೇಶದ ಚಲನ ಚಿತ್ರೋದ್ಯಮ ಹಾಗೂ ಟೆಲಿವಿಜನ್ ಉದ್ಯಮ ಸುಮಾರು 60,000 ಕೋಟಿ ರೂಪಾಯಿಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ಅಧ್ಯಯನ ಸಂಸ್ಥೆ ವರದಿಯಲ್ಲಿ ಬಹಿರಂಗಪಡಿಸಿದೆ.

ಸರಕಾರ, ಒಂದು ವೇಳೆ ಪೈರಸಿ ಹಾವಳಿಯನ್ನು ತಡೆಯದಿದ್ದಲ್ಲಿ, ಚಿತ್ರೋದ್ಯಮಕ್ಕೆ ಅಪಾರ ನಷ್ಟವಾಗಲಿದೆ.ಸರಕಾರ ಪೈರಸಿ ಹಾವಳಿ ತಡೆಗೆ ಅಗತ್ಯವಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅಧ್ಯಯನ ವರದಿಯಲ್ಲಿ ಸಲಹೆ ನೀಡಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ