ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಸರ್ವ್ ಬ್ಯಾಂಕ್‌ ಸಂಕೇತಗಳಿಗಾಗಿ ನಿರೀಕ್ಷೆ:ಭಟ್ (SBI | Reserve Bank | OP Bhatt | Liquidity | Credit growth)
Bookmark and Share Feedback Print
 
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಸ್‌ಬಿಐ ಬ್ಯಾಂಕ್, ಶೀಘ್ರದಲ್ಲಿ ಬಡ್ಡಿ ದರಗಳಲ್ಲಿ ಏರಿಕೆಯಿಲ್ಲ.ರಿಸರ್ವ್ ಬ್ಯಾಂಕ್‌ನಿಂದ ಮತ್ತಷ್ಟು ಸಂಕೇತಗಳಿಗಾಗಿ ಮತ್ತಷ್ಟು ನಿರೀಕ್ಷಿಸಲಾಗುತ್ತದೆ ಎಂದು ಬ್ಯಾಂಕ್‌ ಮೂಲಗಳು ತಿಳಿಸಿವೆ.

ಶೀಘ್ರದಲ್ಲಿ ಸಾಲದ ಮೇಲಿನ ಬಡ್ಡಿದರಗಳಲ್ಲಿ ಏರಿಕೆ ಮಾಡುವ ಉದ್ದೇಶವಿಲ್ಲ.ಮುಂಬರುವ ಏಪ್ರಿಲ್‌ ತಿಂಗಳಲ್ಲಿ ಆರ್‌ಬಿಐ ಆರ್ಥಿಕ ಪರಿಷ್ಕರಣ ಸಭೆಯವರೆಗೆ ಕಾಯ್ದು ನೋಡಬೇಕಾಗಿದೆ. ಬ್ಯಾಂಕ್‌ನಲ್ಲಿ ನಗದು ಹಣದ ಹರಿವು ಹೇರಳವಾಗಿದೆ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ತಿಳಿಸಿದ್ದಾರೆ.

ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರದಂದು ಅನಿರೀಕ್ಷಿತವಾಗಿ ರೆಪೋ ದರಗಳಲ್ಲಿ ಶೇ.0.25ರಷ್ಟು ಬೇಸಿಸ್ ಪಾಯಿಂಟ್‌ಗಳಷ್ಟು ಏರಿಕೆ ಮಾಡಿದೆ.

ರಿಸರ್ವ್ ಬ್ಯಾಂಕ್,ಮುಂದಿನ ತಿಂಗಳು ನಡೆಯಲಿರುವ ಆರ್ಥಿಕ ಪರಿಷ್ಕರಣ ಸಭೆಯಲ್ಲಿ, 2010-11ರ ಆರ್ಥಿಕ ಸಾಲಿನಲ್ಲಿ ಆರ್ಥಿಕ ನೀತಿಗಳನ್ನು ಬಿಗಿಗೊಳಿಸುವ ನಿರೀಕ್ಷೆಯಿದೆ ಎಂದು ಭಟ್ ತಿಳಿಸಿದ್ದಾರೆ.

ಎಸ್‌ಬಿಐ ಬ್ಯಾಂಕ್‌ ಸಾಲ ವೃದ್ಧಿ ಕುರಿತಂತೆ ಮಾತನಾಡಿದ ಭಟ್, ಪ್ರಸಕ್ತ ಸಮಯದಲ್ಲಿ ಸಾಲದ ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಶೇ.20ರಷ್ಟು ವೃದ್ಧಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ