ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ: ಪ್ರತಿ 10 ಗ್ರಾಂಗೆ 16,660 ರೂಪಾಯಿ (Gold prices | Ornaments | Bullion market | Selling pressure)
Bookmark and Share Feedback Print
 
ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟಿನಿಂದಾಗಿ ಚಿನ್ನದ ದರ ಪ್ರತಿ 10ಗ್ರಾಂಗೆ 280 ರೂಪಾಯಿಗಳ ಇಳಿಕೆಯಾಗಿ 16,660 ರೂಪಾಯಿಗಳಿಗೆ ತಲುಪಿದೆ.

ಸ್ಟಾಂಡರ್ಡ್ ಚಿನ್ನ ಹಾಗೂ ಆಭರಣಗಳ ದರಗಳಲ್ಲಿ ತಲಾ 280 ರೂಪಾಯಿಗಳ ಇಳಿಕೆಯಾಗಿ ಕ್ರಮವಾಗಿ 16,660 ಮತ್ತು 16,510 ರೂಪಾಯಿಗಳಿಗೆ ತಲುಪಿದೆ.

ಚಿನ್ನದ ದರದಲ್ಲಿ ಕಳೆದ ಕೆಲ ದಿನಗಳಿಂದ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಂದ ಹಾಗೂ ಸಂಗ್ರಹಕಾರರಿಂದ ಚಿನ್ನದ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.

ಸಾಗರೋತ್ತರ ಮಾರುಕಟ್ಟೆಗಳಲ್ಲಿ ಚಿನ್ನದ ಪ್ರತಿ ಔನ್ಸ್‌ಗೆ 19.90 ಡಾಲರ್‌ಗಳ ಕುಸಿತವಾಗಿ 1,107.60 ಡಾಲರ್‌ಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ