ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಲ್‌ಜಿ ಉತ್ಪನ್ನ ದರಗಳಲ್ಲಿ ಶೇ.3.5ರಷ್ಟು ಹೆಚ್ಚಳ (LG Electronics | Home Appliances | Products | Increased prices)
Bookmark and Share Feedback Print
 
ಗೃಹೋಪಕರಣ ತಯಾರಿಕೆ ಸಂಸ್ಥೆಯಾದ ಎಲ್‌ಜಿ ಎಲೆಕ್ಟ್ರಾನಿಕ್ಸ್ ಕಂಪೆನಿ, ಮುಂಬರುವ ಏಪ್ರಿಲ್‌ನಿಂದ ಉತ್ಪನ್ನಗಳ ದರಗಳಲ್ಲಿ ಶೇ.3.5ರಷ್ಟು ಹೆಚ್ಚಳವಾಗಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಎಲ್‌ಜಿ ಎಲೆಕ್ಟ್ರಾನಿಕ್ಸ್ ವಹಿವಾಟು ಮುಖ್ಯಸ್ಥ ರಾಜೀವ್ ಜೈನ್ ಮಾತನಾಡಿ, ಮುಂದಿನ ತಿಂಗಳಿನಿಂದ ಕೆಲ ಉತ್ಪನ್ನಗಳ ದರಗಳಲ್ಲಿ ದರ ಏರಿಕೆಯಾಗಲಿದೆ ಎಂದು ತಿಳಿಸಿದ್ದಾರೆ.

ಪೆಟ್ರೋಲಿಯಂ ಮತ್ತು ಅಬಕಾರಿ ಹಾಗೂ ಇತರ ತೆರಿಗೆಗಳಲ್ಲಿ ಹೆಚ್ಚಳವಾಗಿದ್ದರಿಂದ, ಉತ್ಪನ್ನಗಳ ದರಗಳಲ್ಲಿ ಶೇ.3.5ರಷ್ಟು ಹೆಚ್ಚಳವಾಗಲಿದೆ ಎಂದು ಜೈನ್ ಸುದ್ದಿಗಾರರಿಗೆ ವಿವರಣೆ ನೀಡಿದ್ದಾರೆ.

ಟೆಲಿವಿಜನ್, ಏರ್‌ಕಂಡೀಶನ್ ಮತ್ತು ರಿಫ್ರಿಜೆರೆಟರ್‌ ದರಗಳಲ್ಲಿ ಕಳೆದ ತಿಂಗಳು ಶೇ.3ರಷ್ಟು ಏರಿಕೆಯನ್ನು ಕಂಪೆನಿ ಘೋಷಿಸಿತ್ತು.

ದೇಶದ ರಿಪ್ರಿಜರೆಟರ್ ಮಾರುಕಟ್ಟೆಯಲ್ಲಿ ಶೇ.28ರಷ್ಟು ಪಾಲನ್ನು ಹೊಂದಿರುವ ಕಂಪೆನಿ, ವಾರ್ಷಿಕವಾಗಿ 3ಸಾವಿರ ಕೋಟಿ ರೂಪಾಯಿಗಳ ವಹಿವಾಟು ಗುರಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಕಂಪೆನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವೈ ವಿ.ವರ್ಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ