ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2010-11ರಲ್ಲಿ 1ಸಾವಿರ ಶಾಖೆಗಳ ವಿಸ್ತರಣೆ:ಎಸ್‌ಬಿಐ (SBI | Branches | Network | ATM | Hire)
Bookmark and Share Feedback Print
 
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ಮುಂದಿನ ಆರ್ಥಿಕ ವರ್ಷದಲ್ಲಿ 1 ಸಾವಿರ ಶಾಖೆಗಳನ್ನು ವಿಸ್ತರಿಸಲಿದ್ದು, ಒಟ್ಟು 13 ಸಾವಿರ ಶಾಖೆಗಳನ್ನು ಹೊಂದಿದಂತಾಗಿದೆ.

ಪ್ರಸಕ್ತ ವರ್ಷದ ಅವಧಿಯಲ್ಲಿ 1ಸಾವಿರ ಶಾಖೆಗಳನ್ನು ಆರಂಭಿಸಿದ್ದು,ಮುಂದಿನ ಆರ್ಥಿಕ ವರ್ಷದಲ್ಲಿ 1 ಸಾವಿರ ಶಾಖೆಗಳನ್ನು ವಿಸ್ತರಿಸಲಿದೆ ಎಂದು ಎಸ್‌ಬಿಐ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ಎಸ್‌ಬಿಐ ಬ್ಯಾಂಕ್, ಮಾರ್ಚ್ ಅಂತ್ಯದ ವೇಳೆಗೆ 12,448 ಶಾಖೆಗಳು ಹಾಗೂ 21,000ಎಟಿಎಂಗಳನ್ನು ಹೊಂದಲಿದ್ದು, ಎಟಿಎಂ ಸಂಖ್ಯೆಗಳನ್ನು 25,000ಕ್ಕೆ ಏರಿಕೆ ಮಾಡುವ ಗುರಿಯನ್ನು ಹೊಂದಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಪ್ರಸ್ತುತ ಆರ್ಥಿಕ ವರ್ಷದಲ್ಲಿ, 1,000 ಶಾಖೆಗಳು ಹಾಗೂ 10,000 ಎಟಿಎಂಗಳನ್ನು ಆರಂಭಿಸಲಾಗಿದ್ದು, 1,000 ಶಾಖೆಗಳಲ್ಲಿ 600 ಶಾಖೆಗಳನ್ನು ಗ್ರಾಮೀಣ ಮತ್ತು ಅರೆಪಟ್ಟಣಗಳಲ್ಲಿ ಆರಂಭಿಸಲಾಗಿದೆ ಎಂದು ಬ್ಯಾಂಕ್‌ನ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

2010-11ರ ಅವಧಿಯಲ್ಲಿ ವಿವಿಧ ಹುದ್ದೆಗಳಿಗಾಗಿ 27,000 ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 20,000-22,000 ಗುಮಾಸ್ತ ಹುದ್ದೆಗಳು ಹಾಗೂ 5,500 ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ.

ದೇಶದ ಗ್ರಾಮೀಣ ಭಾಗಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಎಸ್‌ಬಿಐ,2,000 ಅಧಿಕಾರಿಗಳನ್ನು ನಿಯೋಜಿಸಲು ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ