ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಮೆಂಟ್ ಮಾರಾಟ ದರದಲ್ಲಿ ಅಲ್ಪ ಏರಿಕೆ (Cement prices | Post-budget| Cement companies | Angel Commodities)
Bookmark and Share Feedback Print
 
ಅಬಕಾರಿ ತೆರಿಗೆಯಲ್ಲಿ ಹೆಚ್ಚಳ,ರೈಲ್ ವ್ಯಾಗನ್‌ಗಳ ಕೊರತೆ ಹಾಗೂ ಸಾಗಾಣಿಕೆ ಬಾಡಿಗೆ ದರ ಏರಿಕೆಯಿಂದಾಗಿ, ಸಿಮೆಂಟ್ ದರದಲ್ಲಿ ಪ್ರತಿ ಬ್ಯಾಗ್‌ಗೆ 10-12 ರೂಪಾಯಿಗಳಷ್ಟು ದರ ಏರಿಕೆಯಾಗಿದೆ.

ಮುಂಗಡ ಬಜೆಟ್ ಮಂಡನೆಯ ನಂತರ, ಸಿಮೆಂಟ್ ಕಂಪೆನಿಗಳು ಉತ್ಪಾದಕ ವೆಚ್ಚದಲ್ಲಿ ಏರಿಕೆಯಾಗಿದ್ದರಿಂದ, ಪ್ರತಿ ಬ್ಯಾಗ್‌ಗೆ 10-12 ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ ಎಂದು ವಹಿವಾಟು ತಜ್ಞ ರೂಪೇಶ್ ಸಂಖೆ ವರದಿಯಲ್ಲಿ ತಿಳಿಸಿದ್ದಾರೆ.

ಅಬಕಾರಿ ತೆರಿಗೆಯಲ್ಲಿ ಹೆಚ್ಚಳವಾಗಿದ್ದರಿಂದ ಸಿಮೆಂಟ್ ದರಗಳಲ್ಲಿ ಏರಿಕೆಯಾಗಿದೆ.ಏತನ್ಮಧ್ಯೆ, 190 ರೂಪಾಯಿಗಳ ದರ ನಿಗದಿಪಡಿಸಿದ ಪ್ರತಿ ಬ್ಯಾಗ್‌ಗೆ, 3 ರೂಪಾಯಿ ತೆರಿಗೆ ಹಾಗೂ 190 ರೂಪಾಯಿಗಳಿಗಿಂತ ಹೆಚ್ಚಿನ ದರ ವಿಧಿಸುವ ಸಿಮೆಂಟ್ ಬ್ಯಾಗ್‌ಗೆ 3.75 ರೂಪಾಯಿಗಳ ತೆರಿಗೆಯನ್ನು ವಿಧಿಸಲಾಗಿದೆ.

ದೇಶದ ಬಹುತೇಕ ಭಾಗಗಳಲ್ಲಿ ಸಾಗಾಣಿಕೆಯ ತೊಂದರೆಯಿಂದಾಗಿ, ಬೇಡಿಕೆಯಲ್ಲಿ ಹೆಚ್ಚಳವಾಗಿದ್ದರಿಂದ ಸಿಮೆಂಟ್ ದರ ಫೆಬ್ರವರಿ ತಿಂಗಳ ಅವಧಿಯಲ್ಲಿ ಗರಿಷ್ಠ ಏರಿಕೆಯನ್ನು ಕಂಡಿತ್ತು.

ಕೇಂದ್ರ ಮತ್ತು ಪಶ್ಚಿಮ ರಾಜ್ಯಗಳಲ್ಲಿನ ಉತ್ತಮ ಬೇಡಿಕೆಯ ಮಧ್ಯೆಯು, ದೇಶದ ಸಿಮೆಂಟ್ ಕೈಗಾರಿಕೋದ್ಯಮ ಫೆಬ್ರವರಿ ತಿಂಗಳಾಂತ್ಯಕ್ಕೆ ಕೇವಲ ಶೇ.4.3ರಷ್ಟು ಚೇತರಿಕೆ ಕಂಡಿದೆ. ಉತ್ಪಾದನೆ ಕೊರತೆಯಿಂದಾಗಿ, ದಕ್ಷಿಣ ಭಾರತದ ಸಿಮೆಂಟ್ ವಹಿವಾಟಿನಲ್ಲಿ ಶೇ.1ರಷ್ಟು ಕುಸಿತ ಕಂಡಿದೆ.

ರಾಷ್ಟ್ರೀಯ ಸಿಮೆಂಟ್ ಬಳಕೆ ಸರಾಸರಿ ಶೇ.92ರಿಂದ ಶೇ.83ಕ್ಕೆ ಇಳಿಕೆ ಕಂಡಿದೆ.ದಕ್ಷಿಣ ಭಾರತದಲ್ಲಿ ಗರಿಷ್ಠ ಕುಸಿತ ಕಂಡಿದ್ದು ಶೇ.88ರಿಂದ ಶೇ.69ಕ್ಕೆ ಇಳಿಕೆ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಿಮೆಂಟ್ ದರ, ಬಜೆಟ್ ದರ ಏರಿಕೆ