ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹಣದುಬ್ಬರ ದರದಲ್ಲಿ ಇಳಿಕೆ ಸಾಧ್ಯತೆ:ಚಕ್ರವರ್ತಿ (RBI | wholesale price index | Inflation | Deputy governor)
Bookmark and Share Feedback Print
 
ಅಹಾರ ಧಾನ್ಯ ಹಾಗೂ ತೈಲ ದರಗಳಲ್ಲಿ ಇಳಿಕೆಯಾಗುವ ಸಾಧ್ಯತೆಗಳಿರುವುದರಿಂದ ಸಗಟು ಸೂಚ್ಯಂಕ ಅಹಾರ ಹಣದುಬ್ಬರ ದರ ಇಳಿಕೆಯಾಗುವ ನಿರೀಕ್ಷೆಯಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪಗೌವರ್ನರ್ ಹೇಳಿದ್ದಾರೆ.

ಶುಕ್ರವಾರದಂದು ಭಾರತೀಯ ರಿಸರ್ವ್ ಬ್ಯಾಂಕ್ ಅನಿರೀಕ್ಷಿತವಾಗಿ, ರೆಪೋ ದರಗಳಲ್ಲಿ ಹೆಚ್ಚಳಗೊಳಿಸಿರುವುದು ಸೂಕ್ತ ಕ್ರಮವಾಗಿದೆ.ಯಾವುದೇ ಸಮಯದಲ್ಲಿ ಕೂಡಾ ದರ ಏರಿಳಿಕೆ ಮಾಡಬಹುದಾಗಿದೆ ಎಂದು ಕೆ.ಸಿ.ಚಕ್ರವರ್ತಿ ತಿಳಿಸಿದ್ದಾರೆ.

ಆರ್ಥಿಕತೆ ಸುಸ್ಥಿತಿಗೆ ಮರಳುತ್ತಿರುವುದು ಹಾಗೂ ಹಣದುಬ್ಬರ ನಿಯಂತ್ರಣಕ್ಕಾಗಿ, 2008ರಿಂದ ರೆಪೋ ದರಗಳಲ್ಲಿ ಕಡಿತ ಮಾಡುತ್ತಾ ಬಂದಿದ್ದ ಆರ್‌ಬಿಐ, ಮೊದಲ ಬಾರಿಗೆ ರೆಪೋ ದರಗಳಲ್ಲಿ ಅಲ್ಪ ಏರಿಕೆ ಘೋಷಿಸಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್ 20 ರಂದು ನಡೆಯಲಿರುವ ಆರ್ಥಿಕ ಪರಿಷ್ಕರಣ ಸಭೆಯಲ್ಲಿ, ಮತ್ತೆ ರೆಪೋ ದರಗಳಲ್ಲಿ ಹೆಚ್ಚಳಗೊಳಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ