ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅನಿಲ ಕೊಳವೆ ಸಂಪರ್ಕ ಯೋಜನೆಗೆ ಚಾಲನೆ:ದೇವ್ರಾ (Pipeline network | Growing economy | Gas Partnership Summit)
Bookmark and Share Feedback Print
 
ದೇಶದ ಪ್ರಮುಖ ನಗರಗಳಿಗೆ ಅನಿಲ ಸರಬರಾಜು ಕೊಳವೆ ಸಂಪರ್ಕವನ್ನು ಒದಗಿಸಲು, ಮುಂಬರುವ 2-3 ವರ್ಷದೊಳಗಾಗಿ 7,450 ಕೀ.ಮಿ. ಕೊಳವೆ ಮಾರ್ಗದ ನಿರ್ಮಾಣ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಏಷ್ಯಾದ ಎರಡನೇ ರಾಷ್ಟ್ರವಾದ ಭಾರತದಲ್ಲಿ, ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಮಾತ್ರ ಅನಿಲ ಕೊಳವೆ ಮೂಲಸೌಕರ್ಯವನ್ನು ಒದಗಿಸಲಾಗಿದೆ. ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ಅನಿಲ ಕೊಳವೆ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ

ಬೃಹತ್ ಸವಾಲನ್ನು ಎದುರಿಸುತ್ತಿರುವ ಉದಯೋನ್ಮುಖ ರಾಷ್ಟ್ರವಾದ ಭಾರತಕ್ಕೆ ದೇಶದ ಎಲ್ಲಾ ಭಾಗಗಳಲ್ಲಿ ಅನಿಲ ಕೊಳವೆ ಸಂಪರ್ಕವನ್ನು ಒದಗಿಸುವುದು ಅಗತ್ಯವಾಗಿದೆ. ದೇಶದ ಎಲ್ಲಾ ಭಾಗಗಳಲ್ಲಿ ಸಂಪರ್ಕ ಒದಗಿಸಿದಲ್ಲಿ ಶೀಘ್ರದಲ್ಲಿ ಚೇತರಿಕೆ ಕಾಣಲು ಸಾಧ್ಯ ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ತಿಳಿಸಿದ್ದಾರೆ.

ಪ್ರಸ್ತುತ ನೈಸರ್ಗಿಕ ಅನಿಲ ಸಾಗಾಣಿಕೆ ಮೂಲಸೌಕರ್ಯ ಸುಮಾರು 10,800 ಕೀ.ಮಿಗಳಾಗಿದ್ದು, ಪ್ರತಿ ದಿನ 270 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ಸ್ ಅನಿಲ ಸರಬರಾಜು ಮಾಡಲಾಗುತ್ತದೆ.

ದೇಶದಲ್ಲಿ ಪ್ರಮುಖ ಅನಿಲ ಕೊಳವೆ ಯೋಜನೆಗಳು ನಿರ್ಮಾಣ ಹಂತದಲ್ಲಿವೆ.ಮುಂಬರುವ 2-3 ವರ್ಷಗಳಲ್ಲಿ 7,450 ಕೀ.ಮಿ. ದೂರದ ಸಂಪರ್ಕವನ್ನು ಒದಗಿಸಿದಲ್ಲಿ 248 ಮಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಮೀಟರ್ಸ್ ಅನಿಲ ಸರಬರಾಜು ಮಾಡಬಹುದಾಗಿದೆ ಎಂದು ದೇವ್ರಾ ತಿಳಿಸಿದ್ದಾರೆ.

ನೈಸರ್ಗಿಕ ಅನಿಲ ದೇಶಕ್ಕೆ ಇಂಧನ ಭಧ್ರತೆಯನ್ನು ನೀಡುವಂತಹದಾಗಿದೆ.ವಿದ್ಯುತ್ ಉತ್ಪಾದನೆಗೆ ಸೂಕ್ತ ಇಂಧನವಾಗಿದೆ. ಇದು ಪರಿಸರ ಪ್ರೇಮಿ ಕೂಡಾ ಹೌದು ಎಂದು ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ