ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾರುತಿ: 10 ಲಕ್ಷ ಕಾರುಗಳ ಮಾರಾಟದ ದಾಖಲೆ (Maruti Suzuki | Carmakers | Sales | Toyota | General Motors)
Bookmark and Share Feedback Print
 
ದೇಶದ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಝುಕಿ ಸಂಸ್ಥೆ, ಒಂದು ವರ್ಷದ ಅವಧಿಯಲ್ಲಿ 10 ಲಕ್ಷ ಕಾರುಗಳನ್ನು ಮಾರಾಟ ಮಾಡಿದ ಖ್ಯಾತಿಗೆ ಒಳಗಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಈಗಾಗಲೇ ಟೋಯೋಟಾ,ಜನರಲ್ ಮೋಟಾರ್ಸ್, ವೊಕ್ಸ್‌ವಾಗನ್, ಫೋರ್ಡ್, ಹೊಂಡಾ, ರೆನೌಲ್ಟ್, ಹುಂಡೈ ಕಂಪೆನಿಗಳು ವಾರ್ಷಿಕವಾಗಿ 10 ಲಕ್ಷ ಕಾರುಗಳ ಮಾರಾಟದ ಗುರಿಯನ್ನು ತಲುಪಿದ್ದು,ಇದೀಗ ಮಾರುತಿ ಸುಝುಕಿ ಕಂಪೆನಿ ಕೂಡಾ ನೂತನವಾಗಿ ಸೇರ್ಪಡೆಗೊಂಡಿದೆ.

1981ರಲ್ಲಿ ಕಂಪೆನಿಯನ್ನು ಸ್ಥಾಪಿಸಿದಾಗ ವಾರ್ಷಿಕವಾಗಿ ಒಂದು ಲಕ್ಷ ಕಾರುಗಳ ಮಾರಾಟದ ಗುರಿಯನ್ನು ಕೂಡಾ ತಲುಪುತ್ತೇವೆ ಎಂದು ಯಾರು ಭಾವಿಸಿರಲಿಲ್ಲ. ಆದರೆ ಕಂಪೆನಿ ವಾರ್ಷಿಕವಾಗಿ 10 ಲಕ್ಷ ಕಾರುಗಳ ಮಾರಾಟದ ಗುರಿಯನ್ನು ತಲುಪಿರುವುದು ರಾಜಕೀಯ ತಂತ್ರವಾಗಿದೆ ಎಂದು ಕಂಪೆನಿಯ ಅಧ್ಯಕ್ಷ ಆರ್‌.ಸಿ ಭಾರ್ಗವಾ ಹೇಳಿದ್ದಾರೆ.

1983ರ ಡಿಸೆಂಬರ್ 14 ರಂದು ಗುರ್ಗಾಂವ್ ಘಟಕದಲ್ಲಿ ಮೊದಲಮಾರುತಿ 800 ಮಾಡೆಲ್ ಕಾರನ್ನು ಬಿಡುಗಡೆ ಮಾಡಿತ್ತು.

ಆರಂಭಿಕ ವರ್ಷದಲ್ಲಿ ಮಾರುತಿ ಕಂಪೆನಿ 840 ಕಾರುಗಳನ್ನು ತಯಾರಿಸಿತ್ತು.ಸಂಪೂರ್ಣ ಆರ್ಥಿಕ ವರ್ಷದಲ್ಲಿ 22 ಸಾವಿರ ಕಾರುಗಳನ್ನು ತಯಾರಿಸಲಾಗಿತ್ತು ಎಂದು ಹೇಳಿದ್ದಾರೆ.

10 ಲಕ್ಷ ಕಾರುಗಳ ಮಾರಾಟದ ಹಿನ್ನೆಲೆಯಲ್ಲಿ ಸಮಾರಂಭವನ್ನು ಆಯೋಜಿಸಲಾಗಿದ್ದು,ಸುಝುಕಿ ಮೋಟಾರ್ ಕಾರ್ಪೋರೇಶನ್ ಅಧ್ಯಕ್ಷ ಒಸಾಮಾ ಸುಝುಕಿ ಉಪಸ್ಥಿತರಿರಲಿದ್ದಾರೆ ಎಂದು ಭಾರ್ಗವಾ ತಿಳಿಸಿದ್ದಾರೆ.

ಮಾರುತಿ ಸುಝುಕಿ ಕಂಪೆನಿ ಇಲ್ಲಿಯವರೆಗೆ 15 ಮಾಡೆಲ್‌ಗಳ 85 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.ಜಪಾನ್‌ನಲ್ಲಿ ಸುಝುಕಿ ಕಂಪೆನಿಯನ್ನು ಹಿಂದಕ್ಕೆ ತಳ್ಳಿ, ಇಂಡಿಯಾದ ಮಾರುತಿ ಸುಝುಕಿ ಕಂಪೆನಿ ಅದ್ಭುತ ಸಾಧನೆಗೈದಿದೆ ಎಂದು ಒಸಾಮಾ ಸಂತಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ