ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪೆಟ್ರೋಲ್, ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಸಾಧ್ಯತೆ (Petrol | Diesel | Euro-IV | Euro-III | Prices)
Bookmark and Share Feedback Print
 
PTI
ದೇಶಧ ಪ್ರಮುಖ 13 ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳ ಏರಿಕೆ ಸನ್ನಿಹಿತವಾಗಿದೆ.ಪೆಟ್ರೋಲಿಯಂ ಸಚಿವಾಲಯ ಪರಿಸರ ಸ್ನೇಹಿ ಯುರೋ-4 ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಗೆ ಮುಂದಾಗಿದ್ದರಿಂದ, ಗ್ರಾಹಕರು ಎರಡು ತಿಂಗಳ ಅವದಿಯಲ್ಲಿ ಎರಡನೇ ಬಾರಿ ದರ ಏರಿಕೆಯ ಬಿಸಿ ಅನುಭವಿಸುವಂತಾಗಿದೆ.

ಪೆಟ್ರೋಲಿಯಂ ಚಿಲ್ಲರೆ ವಹಿವಾಟುದಾರರು ದೆಹಲಿ ,ಮುಂಬೈ, ಚೆನ್ನೈ,ಕೊಲ್ಕತಾ, ಬೆಂಗಳೂರು, ಹೈದ್ರಾಬಾದ್ ಮತ್ತು ಅಹ್ಮದಾಬಾದ್ ನಗರಗಳಲ್ಲಿ ಏಪ್ರಿಲ್ 1 ರಂದು ಯುರೋ-4 ವಾಹನ ಇಂಧನಗಳ ಮಾರಾಟ ಆರಂಭಿಸಲಿದ್ದಾರೆ.

ಯುರೋ-4 ಪೆಟ್ರೋಲ್ ಮತ್ತು ಡೀಸೆಲ್ ದೇಶದ ಇತರ ಭಾಗಗಳಲ್ಲಿ, ಹಂತಹಂತವಾಗಿ ಏಪ್ರಿಲ್ 1ರಿಂದ ಅಕ್ಟೋಬರ್ 1ರ ವರೆಗೆ ವಿತರಿಸಲಾಗುತ್ತಿದೆ ಎಂದು ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ಎಸ್‌.ಸುಂದರೇಶನ್ ತಿಳಿಸಿದ್ದಾರೆ.

ಯುರೋ- 4 ಪೆಟ್ರೋಲ್ ಮತ್ತು ಡೀಸೆಲ್ ಪರಿಸರ ಸ್ನೇಹಿಯಾಗಿದ್ದು,ಸಲ್ಫರ್ ಮತ್ತು ಬೆಂಜಿನ್‌ನಂತಹ ಪರಿಸರ ಮೌಲಿನ್ಯಗಳನ್ನು ಉಂಟು ಮಾಡುವುದಿಲ್ಲವೆಂದು ಪೆಟ್ರೋಲಿಯಂ ಸಚಿವಾಲಯದ ಮೂಲಗಳು ತಿಳಿಸಿವೆ.

ಕಳೆದ ಏಪ್ರಿಲ್ 2005ರಲ್ಲಿ ದೆಹಲಿ, ಮುಂಬೈ, ಕೋಲ್ಕತಾ, ಹೈದ್ರಾಬಾದ್, ಚೆನ್ನೈ ಮತ್ತು ಆಗ್ರಾ ನಗರಗಳು ಯುರೋ-3 ನಿಯಮಗಳಡಿಯಲ್ಲಿ ಘೋಷಿಸಲಾಗಿದ್ದು, ಪೆಟ್ರೋಲ್‌ ಪ್ರತಿ ಲೀಟರ್‌ಗೆ 0.30 ರೂಪಾಯಿ ಮತ್ತು ಡೀಸೆಲ್‌ಗೆ 0.24 ರೂಪಾಯಿ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಅಬಕಾರಿ ತೆರಿಗೆಯಲ್ಲಿ ಹೆಚ್ಚಳ ಹಾಗೂ ಕಚ್ಚಾ ತೈಲದಲ್ಲಿ ಶೇ.5ರಷ್ಟು ತೆರಿಗೆ ಏರಿಕೆಯಿಂದಾಗಿ, ಫೆಬ್ರವರಿ 27 ರಂದು ತೈಲ ಕಂಪೆನಿಗಳು ಪೆಟ್ರೋಲ್‌, ಪ್ರತಿ ಲೀಟರ್‌ಗೆ 2.71 ರೂಪಾಯಿ ಮತ್ತು ಡೀಸೆಲ್‌ಗೆ 2.55 ರೂಪಾಯಿಗಳಷ್ಟು ದರ ಏರಿಕೆ ಘೋಷಿಸಿದ್ದವು.

ಸರಕಾರಿ ಸ್ವಾಮ್ಯದ ತೈಲ ಕಂಪೆನಿಗಳಾದ, ಇಂಡಿಯನ್ ಆಯಿಲ್ ಕಾರ್ಪೋರೇಶನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಶನ್ ಕಂಪೆನಿಗಳು ಉತ್ತಮ ಗುಣಮಟ್ಟದ ಪರಿಸರ ಸ್ಹೇಹಿ ಪೆಟ್ರೋಲ್ ಮತ್ತು ಡೀಸೆಲ್ ಉತ್ಪಾದನೆಗಾಗಿ 23,500 ಕೋಟಿ ರೂಪಾಯಿಗಳ ಹೂಡಿಕೆ ಮಾಡುತ್ತಿದ್ದು, ದರ ಏರಿಕೆಯಿಂದ ವೆಚ್ಚವನ್ನು ಭರಿಸಲು ನೆರವಾಗುತ್ತದೆ ಎಂದು ಕಂಪೆನಿಗಳ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ