ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗಲ್ಫ್‌‌ನಿಂದ ಏರಿಂಡಿಯಾ ಆದಾಯದಲ್ಲಿ ಶೇ.19.5ರಷ್ಟು ಹೆಚ್ಚಳ (Air India | Gulf | India | Sales revenue | Dubai | Sharjah)
Bookmark and Share Feedback Print
 
ಭಾರತದಿಂದ ಗಲ್ಫ್ ರಾಷ್ಟ್ರಗಳಿಗೆ ಸಂಚರಿಸುವ ಪ್ರಮುಖ ವಿಮಾನಯಾನ ಸಂಸ್ಥೆ ಏರಿಂಡಿಯಾ,ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.19.5ರಷ್ಟು ಹೆಚ್ಚಳವಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಏರ್‌ಇಂಡಿಯಾಗೆ ಗಲ್ಫ್ ರಾಷ್ಟ್ರಗಳು ಬಹುದೊಡ್ಡ ಮಾರುಕಟ್ಟೆಗಳಾಗಿದ್ದು, ದುಬೈ ಮತ್ತು ಶಾರ್ಜಾ ಉದಯೋನ್ಮುಖ ಮಹತ್ವದ ಪ್ರವಾಸಿ ಕೇಂದ್ರಗಳಾಗಿವೆ ಎಂದು ಪ್ರಾದೀಶಿಕ ವ್ಯವಸ್ಥಾಪಕ ಅಭಯ್ ಪಾಠಕ್ ಹೇಳಿದ್ದಾರೆ.

ಏರಿಂಡಿಯಾ ವಿಮಾನಯಾನ ಸಂಸ್ಥೆ ವಾರದ ಅವಧಿಯಲ್ಲಿ ಸುಮಾರು 200 ನಿಮಾನ ಸಂಚಾರ ಹಾರಾಟವನ್ನು ನಡೆಸುತ್ತಿದೆ ಎಂದು ಏರಿಂಡಿಯಾ ಮೂಲಗಳು ತಿಳಿಸಿವೆ.

ಏರಿಂಡಿಯಾ ಸಂಸ್ಥೆ ಐಸಿ ಕೋಡ್ 80 ಮತ್ತು ಕಡಿಮೆ ಪ್ರಯಾಣಿಕ ದರದ 100 ವಿಮಾನಗಳು ಸಂಚರಿಸುತ್ತಿವೆ ಎಂದು ಪಾಠಕ್ ತಿಳಿಸಿದ್ದಾರೆ.

ಜಾಗತಿಕ ವಹಿವಾಟಿನಲ್ಲಿ ಆರ್ಥಿಕ ಕುಸಿತದ ಪ್ರಭಾವದ ಮಧ್ಯೆಯು ಏರಿಂಡಿಯಾ ಸಂಸ್ಥೆ ಚೇತರಿಸಿಕೊಂಡಿದ್ದು, ವಿಶ್ವದ ಹಲವಾರು ರಾಷ್ಟ್ರಗಳು ನಮ್ಮ ಮಾರುಕಟ್ಟೆಯತ್ತ ಗಮನಹರಿಸುತ್ತಿವೆ ಎಂದು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ