ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಂಪೆನಿಗಳಿಂದ ಮೂಲಸೌಕರ್ಯ ಕ್ಷೇತ್ರಗಳ ಬಾಂಡ್‌‌:ಪ್ರಣಬ್ (Infra bonds | Pvt players | Public sector | Tax benefits)
Bookmark and Share Feedback Print
 
ತೆರಿಗೆ ರಿಯಾಯತಿಯೊಂದಿಗೆ ದೀರ್ಘಾವಧಿಯ ಮೂಲಸೌಕರ್ಯ ಕ್ಷೇತ್ರಗಳ ಬಾಂಡ್‌ಗಳನ್ನು ನೀಡಿ ಸಂಪನ್ಮೂಲಗಳನ್ನು ಹೆಚ್ಚಿಸಲು ಸರಕಾರ ಅನುಮತಿ ನೀಡಲಾಗುವುದು ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಖಾಸಗಿ ಕ್ಷೇತ್ರ ಹಾಗೂ ಸಾರ್ವಜನಿಕ ಕ್ಷೇತ್ರದ ಕಂಪೆನಿಗಳು ದೀರ್ಘಾವಧಿ ಮೂಲಸೌಕರ್ಯ ಬಾಂಡ್‌ಗಳನ್ನು ನೀಡುವ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಹೆಚ್ಚಿಸಲು ಸರಕಾರ ಸಮ್ಮತಿಸಿದೆ ಎಂದು ಮೂಲಸೌಕರ್ಯ ಕ್ಷೇತ್ರ ಕುರಿತಂತೆ ಆಯೋಜಿಸಲಾದ ಸಮಾರಂಭದಲ್ಲಿ ತಿಳಿಸಿದ್ದಾರೆ.

2010-11ರ ಬಜೆಟ್ ಮಂಡನೆಯಲ್ಲಿ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚಳಗೊಳಿಸಲು, 20 ಸಾವಿರ ರೂಪಾಯಿಗಳವರೆಗಿನ ಹೂಡಿಕೆಗೆ ತೆರಿಗೆ ವಿನಾಯತಿಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ದೀರ್ಘಾವಧಿಯ ಮೂಲಸೌಕರ್ಯ ಕ್ಷೇತ್ರದ ಬಾಂಡ್‌ಗಳಿಂದ ಎದುರಾಗುವ ಲಾಭದ ಬಗ್ಗೆ, ಸರಕಾರ ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲಿದೆ ಎಂದು ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ