ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೂಗಲ್ ನಿರ್ಗಮನ ಚೀನಾದಿಂದ ಪ್ರತ್ಯೇಕಿಸುವ ಕೃತ್ಯ (Google | China | Isolated act | Government | Google.cn)
Bookmark and Share Feedback Print
 
ಜಾಗತಿಕ ಮಟ್ಟದ ಅಂತರ್ಜಾಲ ಸಂಸ್ಥೆ ಗೂಗಲ್, ದೇಶದಿಂದ ಕಂಪೆನಿಯನ್ನು ಸ್ಥಳಾಂತರಿಸುವ ಪ್ರಯತ್ನ ಮಾಡುತ್ತಿದೆ.ಆದರೆ ಗೂಗಲ್ ನಿರ್ಗಮನವನ್ನು ರಾಜಕೀಯಗೊಳಿಸದಿದ್ದಲ್ಲಿ, ಅಮೆರಿಕ- ಚೀನಾ ಮಧ್ಯೆ ಯಾವುದೇ ಬಿಕ್ಕಟ್ಟು ಉಲ್ಬಣಗೊಳ್ಳುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಕಿನ್ ಗಾಂಗ್ ಹೇಳಿದ್ದಾರೆ.

ಗೂಗಲ್ ದೇಶದಿಂದ ನಿರ್ಗಮಿಸುತ್ತಿರುವ ಹಿನ್ನೆಲೆಯಲ್ಲಿ, ಕಂಪೆನಿ ಚೀನಾದ ನಿಯಮಗಳನ್ನು ಉಲ್ಲಂಘಿಸಿದೆ ಎನ್ನುವ ವಿವಾದವನ್ನು ಸರಕಾರ ಕಾನೂನಿನಡಿಯಲ್ಲಿ ಕೈಗೆತ್ತಿಕೊಳ್ಳಲಿದೆ ಎಂದು ತಿಳಿಸಿದ್ದಾರೆ.

ಜಾಗತಿಕ ಮಟ್ಟದ ಖ್ಯಾತ ಅಂತರ್ಜಾಲ ಸಂಸ್ಥೆ ಗೂಗಲ್, ಚೀನಾ ಭಾಷೆಯ ಸರ್ಚ್ ಇಂಜಿನ ಫಲಿತಾಂಶಗಳನ್ನು ಸೆನ್ಸಾರ್‌ ಮಾಡುವುದಾಗಿ ಲಿಖಿತದಲ್ಲಿ ನೀಡಿದ ವಿಶ್ವಾಸವನ್ನು ಉಲ್ಲಂಘಿಸಿದ್ದು, ಸಂಪೂರ್ಣ ತಪ್ಪಿನಿಂದ ಕೂಡಿದೆ.ಚೀನಾದ ಮೇಲೆ ಹ್ಯಾಕಿಂಗ್ ದಾಳಿಯ ಆರೋಪಗಳನ್ನು ಮಾಡುತ್ತಿದೆ ಎಂದು ಚೀನಾದ ಅಧಿಕಾರಿಗಳು ಆರೋಪಿಸಿದ್ದಾರೆ.

ಅಂತರ್ಜಾಲ ಸಂಸ್ಥೆ ಚೀನಿ ಭಾಷೆಯ ಸರ್ಚ್ ಇಂಜಿನ್ ಗೂಗಲ್.ಸಿಎನ್‌ನಿಂದ ಸೆನ್ಸಾರ್ ಮಾಡುವುದನ್ನು ನಿಲ್ಲಿಸಲಾಗಿದೆ. ಚೀನಾದ ಬಳಕೆದಾರರು ಹಾಂಗ್‌ಕಾಂಗ್‌ ಸೈಟ್ ಬಳಕೆ ಮಾಡಬಹುದು ಎಂದು ಘೋಷಿಸಿದ ನಂತರ ಸ್ಟೇಟ್ ಕೌನ್ಸಿಲ್ ಇನ್‌ಫಾರ್ಮೆಶನ್ ಕೇಂದ್ರದ ಇಂಟರ್‌ನೆಟ್ ಬ್ಯೂರೋದ ಉಸ್ತುವಾರಿ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

ಚೀನಾದ ಮಾರುಕಟ್ಟೆಯನ್ನು ಪ್ರವೇಶಿಸಿದಾಗ ಗೂಗಲ್ ಸಂಸ್ಥೆ, ಚೀನಾದ ಸರ್ಚಿಂಗ್ ಸೇವೆಯಲ್ಲಿ ಸೆನ್ಸಾರ್ ಮಾಡುವುದಾಗಿ ನೀಡಿದ ಲಿಖಿತ ನಿಯಮಾವಳಿಗಳನ್ನು ಉಲ್ಲಂಘಿಸಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಸಂಸ್ಥೆಯೊಂದು ವರದಿ ಮಾಡಿದೆ.

ಚೀನಾ ಸರಕಾರ ಬೆಂಬಲಿತ ಹ್ಯಾಕರ್‌ಗಳ ದಾಳಿಯಿಂದಾಗಿ, ಚೀನಾದ ಮಾರುಕಟ್ಟೆಯಿಂದ ನಿರ್ಗಮಿಸಲು ಬಯಸಿರುವುದಾಗಿ ಹೇಳಿಕೆ ನೀಡಿದ ಎರಡು ತಿಂಗಳುಗಳ ನಂತರ, ಗೂಗಲ್ ಕಾನೂನು ವಿಭಾಗದ ಮುಖ್ಯಸ್ಥ ಡೇವಿಡ್ ಡ್ರುಮೊಂಡ್ ಇಂದು ಚೀನಾ ಭಾಷೆಯ ಸೆನ್ಸಾರ್ ಮಾಡುವುದನ್ನು ನಿಲ್ಲಿಸಲಾಗಿದೆ ಎಂದು ಘೋಷಿಸಿದ್ದಾರೆ.

ಗೂಗಲ್ ಸಂಸ್ಥೆಯ ಮನವಿಯ ಮೇರೆಗೆ, ಚೀನಾದ ಸರಕಾರಿ ಅಧಿಕಾರಿಗಳು ಜನೆವರಿ 29 ರಂದು ಹಾಗೂ ಫೆಬ್ರವರಿ 25 ರಂದು ಚರ್ಚೆ ನಡೆಸಲಾಗಿತ್ತು ಎಂದು ಚೀನಾ ಅಧಿಕಾರಿಗಳು ತಿಳಿಸಿದ್ದಾರೆ.

ಗೂಗಲ್ ಸಮಸ್ಯೆಗಳಿಗೆ ತೀವ್ರವಾಗಿ ಸ್ಪಂದಿಸಲಾಗಿದೆ.ಮುಂದಿನ ದಿನಗಳಲ್ಲಿ ಕೂಡಾ ಚೀನಾದಲ್ಲಿ ಕಾರ್ಯನಿರ್ವಹಿಸಬಹುದು. ಆದರೆ ಚೀನಾದ ಕಾನೂನು ಪಾಲಿಸುವುದು ಅಗತ್ಯವಾಗಿದೆ.ಚೀನಾದಿಂದ ನಿರ್ಗಮಿಸುವುದು ಅಥವಾ ಮುಂದುವರಿಯುವುದು ಕಂಪೆನಿಗೆ ಬಿಟ್ಟ ಸಂಗತಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಾವುದೇ ವಿದೇಶಿ ಕಂಪೆನಿಗಳು, ಚೀನಾದಲ್ಲಿ ಕಾರ್ಯನಿರ್ವಹಿಸುವಾಗ ಚೀನಾದ ನೀತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ.ಇಲ್ಲವಾದಲ್ಲಿ ಚೀನಾದಿಂದ ನಿರ್ಗಮಿಸಬೇಕಾಗುತ್ತದೆ ಎಂದು ಸರಕಾರಿ ಅಧಿಕಾರಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೂಗಲ್ ಚೀನಾ, ಸ್ಥಳಾಂತರ, ಸರಕಾರ