ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮದ್ಯ ಸೇವನೆ:ಕಾಶ್ಮರದಲ್ಲಿ ಏರಿಕೆ, ಲಡಾಕ್‌ನಲ್ಲಿ ಇಳಿಕೆ (Liquor | Consumption | Kashmir valley | Finance Ministry | Ladakh)
Bookmark and Share Feedback Print
 
ಕಾಶ್ಮಿರ ಕಣಿವೆಯಲ್ಲಿ ಉಗ್ರಗಾಮಿಗಳು ಮದ್ಯಕ್ಕೆ ನಿಷೇಧ ಹೇರಿರುವ ಮಧ್ಯೆಯು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಮದ್ಯದ ಬಳಕೆಯಲ್ಲಿ ಶೇ.30ರಷ್ಟು ಹೆಚ್ಚಳವಾಗಿ 15.33 ಲಕ್ಷ ಬಾಟಲ್‌ಗಳಷ್ಟು ಮದ್ಯವನ್ನು ಮಾರಾಟ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಮದ್ಯದ ಬಳಕೆಯ ಪ್ರಮಾಣ, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಹೆಚ್ಚಳವಾಗಿದೆ ಎಂದು ವಿತ್ತಸಚಿವಾಲಯ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.ಆದರೆ ಲಡಾಕ್‌ನಲ್ಲಿ ಮದ್ಯ ಬಳಕೆ ಪ್ರಮಾಣದಲ್ಲಿ ಇಳಿಕೆಯಾಗಿದೆ.

2008-09ರ ಅವಧಿಯಲ್ಲಿ 11.48 ಲಕ್ಷ ಬಾಟಲ್‌ಗಳನ್ನು ಮಾರಾಟ ಮಾಡಲಾಗಿತ್ತು.2009-10ರ ಅವಧಿಯಲ್ಲಿ 15.33 ಲಕ್ಷ ಬಾಟಲ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಅಬಕಾರಿ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಲಡಾಕ್‌ನಲ್ಲಿ 2008-09ರ ಸಾಲಿನಲ್ಲಿ 23 ಲಕ್ಷ ಬಾಟಲ್‌ಗಳನ್ನು ಮಾರಾಟ ಮಾಡಲಾಗಿತ್ತು. ಆದರೆ 2009-10ರ ಅವಧಿಯಲ್ಲಿ ಮಾರಾಟದಲ್ಲಿ ಇಳಿಕೆಯಾಗಿ 20.60 ಲಕ್ಷ ಮದ್ಯದ ಬಾಟಲ್‌ಗಳನ್ನು ಮಾರಾಟ ಮಾಡಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ