ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಯುರೋ04 ಇಂಧನ ಬಿಡುಗಡೆ ಐತಿಹಾಸಿಕ ಹೆಜ್ಜೆ:ದೀಕ್ಷಿತ್ (Sheila Dikshit | Euro-IV | CNG | Commonwealth Games)
Bookmark and Share Feedback Print
 
ಪರಿಸರ ಸ್ನೇಹಿಯಾದ ಯುರೋ-4 ಪೆಟ್ರೋಲ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವುದು ಐತಿಹಾಸಿಕವಾಗಿದೆ.ರಾಜಧಾನಿಯನ್ನು ಜಾಗತಿಕ ಮಟ್ಟದ ನಗರವಾಗಿ ಬೆಳೆಯಲು ನೆರವಾಗಲಿದೆ ಎಂದು ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸಂತಸ ವ್ಯಕ್ತಪಡಿಸಿದ್ದಾರೆ.

ಪರಿಸರ ಸ್ನೇಹಿಯಾದ ಯುರೋ-4 ಪೆಟ್ರೋಲ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವುದು, ದೆಹಲಿಯಲ್ಲಿ ಸಿಎನ್‌ಜಿ ಬಿಡುಗಡೆಗೊಳಿಸಿದ ನಂತರದ ಐತಿಹಾಸಿಕ ಸಂಗತಿಯಾಗಿದೆ.ಪರಿಸರ ಮಾಲಿನ್ಯವನ್ನು ಉಂಟು ಮಾಡುವದಿಲ್ಲವಾದ್ದರಿಂದ ನಾಗರಿಕರಿಗೆ ಸ್ವಚ್ಚವಾದ ಗಾಳಿಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ದೀಕ್ಷಿತ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಕಾಮನ್‌ವೆಲ್ತ್ ಗೇಮ್ಸ್‌ ಪಂದ್ಯಾವಳಿಗಳು ನಡೆಯಲಿರುವ ಹಿನ್ನೆಲೆಯಲ್ಲಿ, ನಗರದಲ್ಲಿ ಮೂಲಸೌಕರ್ಯ ಕ್ಷೇತ್ರಗಳನ್ನು ಹೆಚ್ಚಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು.

ಲಂಡನ್, ಪ್ಯಾರಿಸ್, ನ್ಯೂಯಾರ್ಕ್ ವಾಷಿಂಗ್ಟನ್‌ ನಗರದಂತೆ ದೆಹಲಿ ನಗರವನ್ನು ಕೂಡಾ ಅಭಿವೃದ್ಧಿ ಪಡಿಸುವ ಕನಸನ್ನು ಹೊಂದಿದ್ದು. ಅದಕ್ಕಾಗಿ ಸರ್ವಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ದೀಕ್ಷಿತ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ