ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಕಠಿಣ ನಿರ್ಧಾರಕ್ಕೆ ಪ್ರಶಸ್ತ ಸಮಯವಾಗಿದೆ:ಸುಬ್ಬಾರಾವ್ (RBI | Inflation | Economy | Demand | pressures)
Bookmark and Share Feedback Print
 
ಭಾರತದ ಆರ್ಥಿಕತೆಯಲ್ಲಿ ಬೇಡಿಕೆ-ಪರ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತ ಸಮಯವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗೌವರ್ನರ್ ಹೇಳಿದ್ದಾರೆ.

ರಿಸರ್ವ್ ಬ್ಯಾಂಕ್ ಕಳೆದ ಶುಕ್ರವಾರದಂದು ಅನಿರೀಕ್ಷಿತವಾಗಿ ಹಣದುಬ್ಬರ ಏರಿಕೆಯನ್ನು ನಿಯಂತ್ರಿಸಲು ಹಾಗೂ ಆರ್ಥಿಕತೆಯ ಹೆಚ್ಚಳಕ್ಕಾಗಿ ರೆಪೋ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌‌ಗಳನ್ನು ಹೆಚ್ಚಿಸಿದೆ.ಮುಂಬರುವ ಏಪ್ರಿಲ್ ತಿಂಗಳ ಅವಧಿಯ ಆರ್ಥಿಕ ಪರಿಷ್ಕರಣ ಸಂದರ್ಭದಲ್ಲಿ ಮತ್ತಷ್ಟು ರೆಪೋ ದರಗಳನ್ನು ಹೆಚ್ಚಿಸುವ ಸಾಧ್ಯತೆಗಳಿವೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ಪ್ರಸಕ್ತ ಸಮಯದಲ್ಲಿ ಕೆಲ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಲ್ಲಿ, ಮುಂದಿನ ದಿನಗಳಲ್ಲಿ ಆರ್ಥಿಕತೆ ಚೇತರಿಕೆ ಕಾಣಲಿದೆ ಎಂದು ಆರ್‌ಬಿಐ ಗೌವರ್ನರ್ ಡಿ.ಸುಬ್ಬಾರಾವ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಏಷ್ಯಾದ ಮೂರನೇ ಬೃಹತ್ ಆರ್ಥಿಕ ರಾಷ್ಟ್ರವಾದ ಭಾರತದಲ್ಲಿ,ಕೈಗಾರಿಕೋದ್ಯಮ ಉತ್ಪಾದನೆಯಲ್ಲಿ ಶೇ.72ರಷ್ಟು ಏರಿಕೆ ಕಂಡಿದೆ. 2007 -08ರ ಅವಧಿಯಲ್ಲಿ ಶೇ.76ರಷ್ಟು ಏರಿಕೆ ಕಂಡಿತ್ತು ಎಂದು ರಿಸರ್ವ್ ಬ್ಯಾಂಕ್ ಗೌವರ್ನರ್ ಡಿ.ಸುಬ್ಬಾರಾವ್ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಬಿಐ, ಹಣದುಬ್ಬರ ದರ, ಆರ್ಥಿಕತೆ