ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿದೇಶಿ ಬ್ಯಾಂಕ್‌ಗಳ ಸ್ವಾಧೀನಕ್ಕೆ ಎಸ್‌ಬಿಐ ಯೋಜನೆ:ಭಟ್ (SBI | Businesses | Public sector | Acquisitions | Network)
Bookmark and Share Feedback Print
 
ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸರಕಾರಿ ಸ್ವಾಮ್ಯದ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ವಿದೇಶಿ ಬ್ಯಾಂಕ್‌ಗಳ ಸ್ವಾಧೀನಕ್ಕೆ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ನಮ್ಮ ಬ್ಯಾಂಕ್‌ಗಳ ನಿಯಮಗಳಿಗೆ ಬದ್ಧವಾಗಿರುವಂತಹ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳ ಖರೀದಿಗೆ ದೊರೆತಲ್ಲಿ , ಖರೀದಿಸುವ ಬಗ್ಗೆ ಯೋಚಿಸಲಾಗುವುದು ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ,ಜಾಗತಿಕ ಮಟ್ಟದಲ್ಲಿ ಬೃಹದಾಕಾರವಾಗಿ ಬೆಳೆದಿದೆ.ಸಾಗರೋತ್ತರ ವಹಿವಾಟಿನಲ್ಲಿ ಶೇ.14ರಷ್ಟು ಪಾಲನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ವಿಸ್ತರಣೆಯಾಗಲಿದೆ ಎಂದು ಭಟ್ ಹೇಳಿದ್ದಾರೆ.

2008-09ರ ಅವಧಿಯಲ್ಲಿ ಎಸ್‌ಬಿಐ ಬ್ಯಾಂಕ್‌ನ ಅಂತಾರಾಷ್ಟ್ರೀಯ ಸಾಲ ನೀಡಿಕೆಯಲ್ಲಿ ಶೇ.54ರಷ್ಟು ಹೆಚ್ಚಳವಾಗಿ, 86,267 ಕೋಟಿ ರೂಪಾಯಿಗಳಿಗೆ ತಲುಪಿದೆ.2007-08ರ ಸಾಲಿನಲ್ಲಿ 56,196 ಕೋಟಿ ರೂಪಾಯಿಗಳ ಸಾಲವನ್ನು ನೀಡಿತ್ತು ಎಂದು ವಿವರಿಸಿದ್ದಾರೆ.

ಮಾರ್ಚ್ 2009ಕ್ಕೆ ಅಂತ್ಯಗೊಂಡಂತೆ, ಎಸ್‌ಬಿಐ ಬ್ಯಾಂಕ್ 32 ರಾಷ್ಟ್ರಗಳಲ್ಲಿ 92 ಶಾಖೆಗಳನ್ನು ಆರಂಭಿಸಲಾಗಿದೆ ಎಂದು ಭಟ್ ತಿಳಿಸಿದ್ದಾರೆ.

ಇತ್ತೀಚೆಗೆ ಸಿಂಗಾಪೂರ್‌ನಲ್ಲಿ ಮೂರು ನೂತನ ಶಾಖೆಗಳನ್ನು ವಿಸ್ತರಿಸಿದ್ದು , ಏಳು ಎಟಿಎಂ ಕೇಂದ್ರಗಳನ್ನು ಆರಂಭಿಸಿದೆ ಎಂದು ಎಸ್‌ಬಿಐ ಮುಖ್ಯಸ್ಥ ಒ.ಪಿ.ಭಟ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ