ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಾ.26ರಿಂದ ಏರ್‌ಟೆಲ್ ಐಫೋನ್‌3ಜಿಎಸ್ ಮಾರುಕಟ್ಟೆಗೆ (Airtel| iPhone 3GS | Prices | India handset)
Bookmark and Share Feedback Print
 
ಕೆಲ ತಿಂಗಳುಗಳ ನಿರೀಕ್ಷೆಯ ನಂತರ ಐಫೋನ್ 3ಜಿಎಸ್‌ ಅಂತಿಮವಾಗಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ.ಕಳೆದ ವಾರ ಏರ್‌ಟೆಲ್ ಸಂಸ್ಥೆ, ಐಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ದರದ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ.

ಇದೀಗ ಐಫೋನ್‌3ಜಿಎಸ್‌ ದರದ ವಿವರಗಳು ಲಭ್ಯವಾಗಿವೆ. ಹಳೆಯ 8ಜಿಬಿ ಆವೃತ್ತಿಯ ಐಫೋನ್ ದರವನ್ನು 29,500 ರೂ, 16ಜಿಬಿ 3ಜಿಎಸ್ ಐಫೋನ್‌ ದರವನ್ನು 35.500 ರೂ, 32ಜಿಬಿಎಸ್ ಐಫೋನ್ ದರ 41,500 ರೂಪಾಯಿಗಳಾಗಿದೆ.ಮಾರ್ಚ್ 26 ರಿಂದ ಭಾರತೀಯ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿವೆ ಎಂದು ಏರ್‌ಟೆಲ್ ಕಂಪೆನಿಯ ಮೂಲಗಳು ತಿಳಿಸಿವೆ.

ಐಫೋನ್ ಬಳಕೆದಾರರಿಗೆ ಡಟಾ ಪ್ಲ್ಯಾನ್ ಪ್ರಕಾರ, ಹ್ಯಾಂಡ್‌ಸೆಟ್‌ಗಳನ್ನು ಏರ್‌ಟೆಲ್‌ ನೆಟ್‌ವರ್ಕ್‌ಗೆ ಲಾಕ್ ಮಾಡಲಾಗುತ್ತಿದ್ದು, ಪ್ರತಿ ತಿಂಗಳಿಗೆ 500 ಎಂಬಿಯಂತೆ ವರ್ಷದ ಅವಧಿಯವರೆಗೆ ಉಚಿತ ಡಟಾ ಒದಗಿಸಲಾಗುತ್ತಿದೆ.

ಮಾರ್ಚ್ 26 ರಿಂದ ದೇಶಾದ್ಯಂತ ಏರ್‌ಟೆಲ್‌ನ ಅಧಿಕೃತ ಮಳಿಗೆಗಳಲ್ಲಿ, ಐಫೋನ್‌3ಜಿಎಸ್ ಮೊಬೈಲ್‌ಗಳನ್ನು ಬಳಕೆದಾರರು ಖರೀದಿಸಬಹುದಾಗಿದೆ.ಹೆಚ್ಚಿನ ವಿವರಗಳಿಗಾಗಿ ಏರ್‌ಟೆಲ್ ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ