ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚೀನಾ: ಅಮೆರಿಕ ಮೂಲದ ಮತ್ತೆರಡು ಕಂಪೆನಿಗಳ ನಿರ್ಗಮನ (Google | US internet companies | China | Authorities)
Bookmark and Share Feedback Print
 
ಅಂತರ್ಜಾಲ ಸೇವೆಯಲ್ಲಿ ಸೆನ್ಸಾರ್‌ಶಿಪ್ ಮತ್ತು ಇತರ ಕಠಿಣ ನಿಯಮಗಳನ್ನು ಚೀನಾದ ಅಧಿಕಾರಿಗಳು ಹೇರಿದ ಹಿನ್ನೆಲೆಯಲ್ಲಿ ಗೂಗಲ್ ನಿರ್ಗಮನದ ನಂತರ,ಇತರ ಎರಡು ಅಮೆರಿಕ ಮೂಲದ ಕಂಪೆನಿಗಳು ಚೀನಾದಿಂದ ನಿರ್ಗಮಿಸುವುದಾಗಿ ಘೋಷಿಸಿವೆ.

ಅಂತರ್ಜಾಲ ಸೇವೆಯಲ್ಲಿ ಮುಂಚೂಣಿಯಲ್ಲಿರುವ ಗೊ ಡ್ಯಾಡಿ ಸಂಸ್ಥೆಯ ಕಾರ್ಯಕಾರಿ ಉಪಾಧ್ಯಕ್ಷ ಕ್ರಿಸ್ಟಿನ್ ಜೊನ್ಸ್ ಮಾತನಾಡಿ,ಚೀನಾ ಭಾಷೆಯ ಸೆನ್ಸಾರ್‌ಶಿಪ್ ಹಾಗೂ ಮುಕ್ತ ಸ್ವಾತಂತ್ಯ ನೀಡದಿರುವುದರಿಂದ ಕಂಪೆನಿ ಚೀನಾದಿಂದ ನಿರ್ಗಮಿಸಲಿದೆ ಎಂದು ತಿಳಿಸಿದ್ದಾರೆ.

ಚೀನಾ ಇತ್ತೀಚೆಗೆ ನೂತನ ನಿಯಮವೊಂದನ್ನು ಹೊರಡಿಸಿ,ನೂತನ ವೆಬ್‌ಸೈಟ್ ಮಾಲೀಕತ್ವ ಹೊಂದುವ ವ್ಯಕ್ತಿಗಳು, ವೈಯಕ್ತಿಕ ವಿವರಗಳು ಹಾಗೂ ಅವರ ಭಾವಚಿತ್ರಗಳನ್ನು ಚೀನಾ ಸರಕಾರಕ್ಕೆ ಸಲ್ಲಿಸಬೇಕಾಗಿದೆ. ಆದ್ದರಿಂದ ಕಂಪೆನಿ ಚೀನಾದಲ್ಲಿ ನೂತನ ವೆಬ್‌‌ಸೈಟ್‌ಗಳನ್ನು ನೋಂದಾಯಿಸುತ್ತಿಲ್ಲ ಎಂದು ಹೇಳಿದ್ದಾರೆ.

ಗೊ ಡ್ಯಾಡಿ ವೆಬ್‌ಸೈಟ್‌ನಂತ ಕಾರ್ಯನಿರ್ವಹಿಸುತ್ತಿರುವ ನೆಟ್‌ವರ್ಕ್ ಸಲ್ಯೂಶನ್ಸ್ ಎಲ್‌ಎಲ್‌ಸಿ,ಚೀನಾದಲ್ಲಿ ನೂತನ ವೆಬ್‌ಸೈಟ್‌ಗಳನ್ನು ನೋಂದಾಯಿಸುವುದು ಸ್ಥಗಿತಗೊಳಿಸಿದ್ದು, ಚೀನಾದಿಂದ ಶೀಘ್ರದಲ್ಲಿ ನಿರ್ಗಮಿಸುವುದಾಗಿ ಹೇಳಿಕೆ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ