ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದಕ್ಷಿಣ ಆಫ್ರಿಕಾದಲ್ಲಿ ತಾಜ್ ಪಂಚತಾರಾ ಹೋಟೆಲ್ ಆರಂಭ (Taj group | Taj hotel | South Africa | FIFA World Cup| Tata, Ratan tata)
Bookmark and Share Feedback Print
 
ತಾಜ್ ಗ್ರೂಪ್ ಆಫ್ ಹೋಟೆಲ್ಸ್‌ ಸಂಸ್ಥೆ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಸುಸಜ್ಜಿತ ಪಂಚಾತಾರಾ ಹೋಟೆಲ್‌ ಆರಂಭಿಸಿದ್ದು, ಜೂನ್‌ನಲ್ಲಿ ನಡೆಯಲಿರುವ ಫಿಫಾ ಫುಟ್ಬಾಲ್ ವಿಶ್ವಕಪ್‌‌ಗಾಗಿ ಈಗಾಗಲೇ ಮುಂಗಡ ಬುಕ್ಕಿಂಗ್ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.

ಪಂಚತಾರಾ ಹೋಟೆಲ್‌ನಲ್ಲಿ 117 ಕೋಣೆಗಳಿದ್ದು,ಸಂಪೂರ್ಣ ಐಷಾರಾಮಿ ಸುಸಜ್ಜಿತವಾಗಿವೆ.ಫಿಫಾ ಪಂದ್ಯಾವಳಿಗೆ ಆಗಮಿಸುವ 15 ರಾಷ್ಟ್ರಗಳ ಕ್ರೀಡಾಪಟುಗಳು, ಅತಿಥಿಗಳು ತಾಜ್‌ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಹೋಟೆಲ್‌ನ ವ್ಯವಸ್ಥಾಪಕ ನಿರ್ದೇಶಕ ಮಿಚೈಲ್ ಪೊವೆಲ್ ತಿಳಿಸಿದ್ದಾರೆ.

1652ರಿಂದ ಯುರೋಪಿಯನ್ನರ ವಾಸಸ್ಥಳವಾಗಿದ್ದ ದಕ್ಷಿಣ ಆಫ್ರಿಕಾದ ರಾಜಧಾನಿ ಕೇಪ್‌ಟೌನ್‌ನಲ್ಲಿ, ತಾಜ್ ಹೋಟೆಲ್ ನಿರ್ಮಿಸಲಾಗಿದೆ. ಜೋಹಾನ್ಸ್‌ಬರ್ಗ್‌ನಲ್ಲಿ ಕೂಡಾ ಪಂಚತಾರಾ ಹೋಟೆಲ್ ನಿರ್ಮಿಸುವ ಯೋಜನೆಯಿದೆ ಎಂದು ತಾಜ್ ಗ್ರೂಪ್‌ ಆಫ್ ಹೋಟೆಲ್ಸ್‌ ವಕ್ತಾರರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ