ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಹಾರೇತರ ವಸ್ತುಗಳಿಗೆ ಹಣದುಬ್ಬರ ವರ್ಗಾವಣೆ:ಮುಖರ್ಜಿ (Pranab Mukherjee | Food inflation | Non-food items | Spread)
Bookmark and Share Feedback Print
 
ಅಹಾರ ಧಾನ್ಯಗಳ ದರ ಇಳಿಕೆಯ ಮಧ್ಯೆಯು ಹಣದುಬ್ಬರ ದರ ಕೆಲ ಅವಧಿಗೆ ಅಹಾರೇತರ ವಸ್ತುಗಳಿಗೆ ವರ್ಗಾವಣೆಯಾಗುವ ಸಾಧ್ಯತೆಗಳಿವೆ ಎಂದು ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.

ಹಣದುಬ್ಬರ ಏರಿಕೆಗೆ ಕಾರಣವಾಗಿದ್ದ ಅಹಾರ ಧಾನ್ಯಗಳ ದರ ಇಳಿಕೆ ಆರಂಭವಾಗಿದೆ. ಆದರೆ ಮುಂದಿನ ದಿನಗಳಲ್ಲಿ ಅಹಾರೇತರ ವಸ್ತುಗಳಿಗೆ ಸ್ಥಳಾಂತರವಾಗುವ ಆತಂಕ ಕಾಡುತ್ತಿದೆ ಎಂದು ಮುಖರ್ಜಿ ತಿಳಿಸಿದ್ದಾರೆ.

ಏತನ್ಮಧ್ಯೆ, ಹಣದುಬ್ಬರ ದರ ನಿಧಾನವಾಗಿ ಅಹಾರ ದರಗಳಿಂದ ಅಹಾರೇತರ ವಸ್ತುಗಳಿಗೆ ಹರಡುತ್ತಿದೆ.ಅಹಾರ ಹಣದುಬ್ಬರ ದರ ಇಳಿಕೆಯಾಗಿದ್ದು, ಮೇ ತಿಂಗಳಾಂತ್ಯಕ್ಕೆ ದರಗಳಲ್ಲಿ ಮತ್ತಷ್ಟು ಇಳಿಕೆಯಾಗಲಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೌಶಿಕ್ ಬಸು ಹೇಳಿದ್ದಾರೆ.

ಅಹಾರೇತರ ಕೆಲ ವಸ್ತುಗಳಿಗೆ ಹಣದುಬ್ಬರದ ಪ್ರಭಾವ ಉಂಟಾಗಿದೆ, ಮಾರ್ಚ್‌ ತಿಂಗಳಿನಿಂದ ಹಣದುಬ್ಬರ ಇಳಿಕೆ ಆರಂಭವಾಗಿದ್ದು, ಮೇ ತಿಂಗಳಾಂತ್ಯಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಕುಸಿತ ಕಾಣಲಿದೆ ಎಂದು ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ