ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.22ಕ್ಕೆ ಕುಸಿದ ಅಹಾರ ಹಣದುಬ್ಬರ ದರ (Food inflation | Price Index | Non-food articles | Reserve Bank of India)
Bookmark and Share Feedback Print
 
PTI
ದೇಶದ ವಾರ್ಷಿಕ ಹಣದುಬ್ಬರ ದರ ಮಾರ್ಚ್ 13ಕ್ಕೆ ವಾರಂತ್ಯಗೊಂಡಂತೆ ಶೇ.16.22ಕ್ಕೆ ಇಳಿಕೆಯಾಗಿದೆ. ಕಳೆದ ವಾರದ ಅವಧಿಯಲ್ಲಿ ಶೇ.16.3ರಷ್ಟಾಗಿತ್ತು ಎಂದು ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ.

ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಚಿವಾಲಯ ಸಗಟು ಸೂಚ್ಯಂಕ ದರದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ್ದು, ಅಹಾರ ಧಾನ್ಯ ವಸ್ತುಗಳಲ್ಲಿ ಶೇ.0.1ರಷ್ಟು ಏರಿಕೆಯಾಗಿದೆ. ಏತನ್ಮದ್ಯೆ, ಅಹಾರೇತರ ವಸ್ತುಗಳ ದರಗಳಲ್ಲಿ ಶೇ.0.2ರಷ್ಟು ಕುಸಿತವಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಅಗತ್ಯ ವಸ್ತುಗಳ ದರಗಳಲ್ಲಿ,ಪ್ರಸ್ಕತ ವರ್ಷದ ಅವಧಿಯಲ್ಲಿ ಅಲ್ಪ ಏರಿಕೆಯಾಗಿದೆ. ಕಳೆದ ವರ್ಷದ ಅವಧಿಯಲ್ಲಿ ಈರುಳ್ಳಿ ದರದಲ್ಲಿ ಇಳಿಕೆಯಾಗಿತ್ತು.

ಪ್ರಸಕ್ತ ವಾರದ ಅವಧಿಯಲ್ಲಿ, ದ್ವಿದಳ ಧಾನ್ಯದಲ್ಲಿ ಶೇ. 31.68, ಆಲೂಗಡ್ಡೆ ಶೇ.5.62,ತರಕಾರಿ ಶೇ.5.12, ಹಾಲು ಶೇ.15.31,ಗೋಧಿ ಶೇ.15.09,ಈರುಳ್ಳಿ ಶೇ.6,64, ಹಣ್ಣು ಶೇ.11.06,ಭತ್ತ ಶೇ.7.42ರಷ್ಟು ದರಗಳಲ್ಲಿ ಹೆಚ್ಚಳವಾಗಿದೆ.

ದೇಶದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅಹಾರ ದರಗಳ ಏರಿಕೆ ನಿಯಂತ್ರಣಕ್ಕಾಗಿ ರೆಪೋ ದರಗಳಲ್ಲಿ ಏರಿಕೆಗೊಳಿಸಿದ್ದು, ಮಾರುಕಟ್ಟೆಗಳಲ್ಲಿ ನಗದು ಹರಿವು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಆರ್‌ಬಿಐ ಮೂಲಗಳು ತಿಳಿಸಿವೆ.

ನವೆಂಬರ್ 2009ರಿಂದ ಫೆಬ್ರವರಿ 2010ರ ವರೆಗೆ ಸುಮಾರು ನಾಲ್ಕು ತಿಂಗಳುಗಳ ಕಾಲ ಹಣದುಬ್ಬರ ಒತ್ತಡದಲ್ಲಿ ಹೆಚ್ಚಳವಾಗಿತ್ತು.ಸಗಟು ಹಣದುಬ್ಬರ ದರ ಶೇ.5.6ರಿಂದ ಶೇ.9.9ಕ್ಕೆ ಏರಿಕೆ ಕಂಡಿತ್ತು ಎಂದು ಆರ್‌ಬಿಐ ಗವರ್ನರ್ ಡಿ.ಸುಬ್ಬಾರಾವ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ