ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 1ಲಕ್ಷ ಕೋಟಿ ರೂ.ಗೆ ತಲುಪಲಿರುವ ವಿಮೆ ಕಂತು (Insurance | Premium | Awareness | Assocham | General insurance)
Bookmark and Share Feedback Print
 
ವಿಮೆ ಕುರಿತಂತೆ ಜಾಗೃತಿ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿಮೆ ಗ್ರಾಹಕರ ಹೆಚ್ಚಳದಿಂದಾಗಿ, 2015ರೊಳಗೆ ವಿಮಾ ಕಂತಿನ ಪಾವತಿ 1ಲಕ್ಷ ಕೋಟಿ ರೂಪಾಯಿಗಳಿಗೆ ತಲುಪುವ ಸಾಧ್ಯತೆಗಳಿವೆ ಎಂದು ಕೈಗಾರಿಕೋದ್ಯಮ ಸಂಘಟನೆಯಾದ ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ, ವಿಮೆ ಮಾಸಿಕ ಕಂತಿನ ಸಂಗ್ರಹ 35,000 ಕೋಟಿ ರೂಪಾಯಿಗಳಿಗೆ ತಲುಪಿದೆ ಎಂದು ವಾಣಿಜ್ಯೋದ್ಯಮ ಚೇಂಬರ್ ತಿಳಿಸಿದೆ.

ವಿಮೆ ಕುರಿತಂತೆ ದೇಶದ ಗ್ರಾಮೀಣ ಭಾಗದ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಜಾಗೃತಿ ಮತ್ತು ಸರಕಾರದಿಂದ ಸಮಾಜಿಕ ವಿಮೆ ಯೋಜನೆಗಳಿಂದಾಗಿ ವಿಮಾ ಕಂತಿನ ಪಾವತಿಯಲ್ಲಿ ಹೆಚ್ಚಳವಾಗಲಿದೆ.

ದೇಶದ ಗ್ರಾಮೀಣ ಭಾಗದಲ್ಲಿರುವ ಸುಮಾರು ಶೇ.60ರಷ್ಟು ಜನತೆಯನ್ನು ವಿಮಾ ಕ್ಷೇತ್ರಗಳು ಸೆಳೆದುಕೊಳ್ಳಬೇಕಾಗಿದೆ.ಮೈಕ್ರೋ-ಫೈನಾನ್ಸಿಂಗ್‌ ಮೂಲಕ ಗ್ರಾಮೀಣ ಭಾಗದ ಜನತೆಗೆ ವಿಮಾ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದು ಪ್ರಕಟಿಸಿದೆ.

ವಾಹನೋದ್ಯಮದ ಕ್ಷೇತ್ರದ ಹೆಲ್ತ್ ಕೇರ್ ,ಹೆಲ್ತ್ ಇನ್‌ಸ್ಯೂರೆನ್ಸ್ ವಿಮೆಯಲ್ಲಿ ಹೆಚ್ಚಳವಾಗಿದ್ದು, ಇತರ ಕ್ಷೇತ್ರಗಳತ್ತ ಗಮನಹರಿಸಬೇಕಾಗಿದೆ ಎಂದು ಕೈಗಾರಿಕೋದ್ಯಮ ಸಂಘಟನೆ ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ