ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಝೈನ್ ಕಂಪೆನಿ ಖರೀದಿಸಿದ ಭಾರ್ತಿ‌ ಏರ್‌ಟೆಲ್ (MTN|Bharati|Zain Telecom)
Bookmark and Share Feedback Print
 
PTI
ಅಂತಿಮವಾಗಿ ಭಾರ್ತಿ ಏರ್‌ಟೆಲ್‌ ಅದೃಷ್ಟಶಾಲಿಯಾಗಿ ಹೊರಹೊಮ್ಮಿದೆ.ಕಳೆದ ಎರಡು ಬಾರಿ ದಕ್ಷ್ಣಿಣ ಆಫ್ರಿಕಾದ ಪ್ರಖ್ಯಾತ ಟೆಲಿಕಾಂ ಕಂಪೆನಿಯನ್ನು ಖರೀದಿಸಲು ನಡೆಸಿದ ಯತ್ನಗಳು ವಿಫಲವಾಗಿದ್ದವು.ಆದರೆ ಕೊನೆಗೂ 10.7 ಬಿಲಿಯನ್ ಡಾಲರ್‌ಗಳನ್ನು ಪಾವತಿಸಿ ಝೈನ್ ಟೆಲಿಕಾಂ ಕಂಪೆನಿಯನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ

ಟಾಟಾ ಸ್ಟಿಲ್ ಕಂಪೆನಿ ಆಂಗ್ಲೋ-ಡಚ್ ಕಂಪೆನಿಯನ್ನು 13.6 ಬಿಲಿಯನ್ ಡಾಲರ್‌ಗಳನ್ನು ಪಾವತಿಸಿ, ವಿದೇಶಿ ಕಂಪೆನಿಯನ್ನು ಖರೀದಿಸಿದ ನಂತರ ಭಾರ್ತಿ ಏರ್‌ಟೆಲ್ ಸಂಸ್ಥೆ 10.7 ಬಿಲಿಯನ್ ಡಾಲರ್‌ಗಳಿಗೆ ಖರೀದಿಸುವ ಮೂಲಕ ಎರಡನೇ ಸ್ಥಾನದಲ್ಲಿದೆ.

ಕುವೈತ್ ಶೇರುಪೇಟೆ ಕಂಪೆನಿ ಶೇರುವಹಿವಾಟುಗಳನ್ನು ರದ್ದುಗೊಳಿಸಿ ಮಾರಾಟಕ್ಕೆ ಸಮ್ಮತಿಸಿತು. ಝೈನ್ ಕಂಪೆನಿಯನ್ನು ಖರೀದಿಸಿದ ಬಗ್ಗೆ ಭಾರ್ತಿ‌ಏರ್‌ಟೆಲ್ ಕಂಪೆನಿಯ ವಕ್ತಾರರನ್ನು ಸಂಪರ್ಕಿಸಿದಾಗ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.

ಭಾರ್ತಿಏರ್‌ಟೆಲ್ ಮುಖ್ಯಸ್ಥ ಸುನೀಲ್ ಮಿತ್ತಲ್ ದಕ್ಷಿಣ ಆಫ್ರಿಕಾಗೆ ತೆರಳಿದ್ದು, ಝೈನ್‌ ಕಂಪೆನಿಯೊಂದಿಗಿನ ಮಾತುಕತೆಯ ನಂತರ ಶೀಘ್ರದಲ್ಲಿ ಅಧಿಕೃತವಾಗಿ ಘೋಷಿಸುವ ಸಾಧ್ಯತೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಆರ್ಥಿಕ ಒಪ್ಪಂದದ ಪ್ರಕಾರ ಭಾರ್ತಿ ಏರ್‌ಟೆಲ್ ಕಂಪೆನಿ, 1.7 ಬಿಲಿಯನ್ ಡಾಲರ್‌ಗಳ ಸಾಲವನ್ನು ಕಡಿತಗೊಳಿಸಿ ಝೈನ್‌ ಕಂಪೆನಿಗೆ 9 ಬಿಲಿಯನ್ ಡಾಲರ್ ಪಾವತಿಸಬೇಕು.ಇದರಲ್ಲಿ 8.3 ಬಿಲಿಯನ್ ಡಾಲರ್‌ಗಳನ್ನು ಮೊದಲ ಹಂತದಲ್ಲಿ ಪಾವತಿಸಬೇಕು. ಉಳಿದ 700 ಮಿಲಿಯನ್ ಡಾಲರ್‌ಗಳನ್ನು ಒಂದು ವರ್ಷದ ನಂತರ ಪಾವತಿಸಬೇಕಾಗಿದೆ.

ಭಾರ್ತಿ ಏರ್‌ಟೆಲ್ ಕಂಪೆನಿ, ದಕ್ಷಿಣ ಆಫ್ರಿಕಾದಲ್ಲಿ ಕೆಲ ಜಾಗತಿಕ ಕಂಪೆನಿಗಳೊಂದಿಗೆ ಸ್ಪರ್ಧಿಸಬೇಕಾಗಿದೆ.ಹೆಚ್ಚುವರಿಯಾಗಿ ಭಾರ್ತಿ ಏರ್‌ಟೆಲ್ ಸಂಸ್ಥೆ, 15 ದೇಶಗಳಲ್ಲಿ ನಿಯಂತ್ರಣ ಹೊಂದಬೇಕಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ