ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೀಡಿಯೋಕಾನ್‌ನಿಂದ ಮೊಬೈಲ್ ಸೇವೆ ಆರಂಭ (Videocon|Mobile service)
Bookmark and Share Feedback Print
 
ವೀಡಿಯೋಕಾನ್ ಗ್ರೂಪ್‌ ಜಿಎಸ್‌ಎಂ ಸೇವೆ ಆರಂಭಿಸುವುದರೊಂದಿಗೆ ದೇಶದ 13ನೇ ಮೊಬೈಲ್ ಕಂಪೆನಿಯಾಗಿ ಹೊರಹೊಮ್ಮಿದೆ. 100 ದಿನಗಳಲ್ಲಿ ದೇಶದ 100 ನಗರಗಳಲ್ಲಿ ಸೇವೆಯನ್ನು ವಿಸ್ತರಿಸಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮೊಬೈಲ್ ಕ್ಷೇತ್ರದ ಮಾರುಕಟ್ಟೆಗಳಲ್ಲಿ ನೂತನ ಕಂಪೆನಿಗಳು ಲಗ್ಗೆಹಾಕುತ್ತಿವೆ. ಆದರೆ ವಾಸ್ತವ ಸಂಗತಿಯಂದರೆ ಒಟ್ಟು ಶೇ.46ರಷ್ಟು ಮೊಬೈಲ್ ಬಳಕೆದಾರರನ್ನು ಮಾತ್ರ ತಲುಪಿವೆ.ಆದ್ದರಿಂದ ಉಳಿದ ಗ್ರಾಹಕರತ್ತ ನಾವು ಗುರಿಯನ್ನು ಹೊಂದಿದ್ದೇವೆ ಎಂದು ವೀಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ದೂತ್ ತಿಳಿಸಿದ್ದಾರೆ.

ವೀಡಿಯೋಕಾನ್ ಗ್ರೂಪ್‌ ಮುಂದಿನ ಮೂರು ವರ್ಷಗಳಲ್ಲಿ 14,000 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಲಿದ್ದು, 7 ಸಾವಿರಕೋಟಿ ರೂಪಾಯಿಗಳನ್ನು ಎಸ್‌ಬಿಐ ಬ್ಯಾಂಕ್ ಸಾಲದ ರೂಪದಲ್ಲಿ ನೀಡಿದೆ ಉಳಿದ ಹಣವನ್ನು ಸರಬರಾಜುದಾರರು ಹಾಗೂ ಸಾಲ ಪಡೆಯುವ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

ಮುಂದಿನ ಮೂರು ವರ್ಷಗಳಲ್ಲಿ 100 ಮಿಲಿಯನ್ ಗ್ರಾಹಕರನ್ನು ಹೊಂದುವ ಮೂಲಕ ಅಗ್ರಶ್ರೇಯಾಂಕದಲ್ಲಿ, ಮೂರನೇ ಸ್ಥಾನವನ್ನು ಹೊಂದುವ ಗುರಿಯಿದೆ ಎಂದು ದೂತ್ ಹೇಳಿದ್ದಾರೆ.

ದೇಶದ ಮೊಬೈಲ್ ಉದ್ಯಮ ಕಳೆದ ಮೂರು ವರ್ಷಗಳಲ್ಲಿ 250 ಮಿಲಿಯನ್ ಗ್ರಾಹಕರನ್ನು ಸೇರ್ಪಡೆಗೊಳಿಸಲಾಗಿದೆ.ಮುಂಬರುವ 2015ರೊಳಗೆ 800 ಮಿಲಿಯನ್ ಗ್ರಾಹಕರನ್ನು ಹೊಂದುವ ಸಾಧ್ಯತೆಗಳಿವೆ ಎಂದು ವೀಡಿಯೋಕಾನ್ ಮುಖ್ಯಸ್ಥ ವೇಣುಗೋಪಾಲ್ ದೂತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ