ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೃಹಸಾಲ ಯೋಜನಾ ಅವಧಿ ವಿಸ್ತರಣೆ:ಎಸ್‌ಬಿಐ (State Bank Of India| Home loan| RBI| SBI)
Bookmark and Share Feedback Print
 
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, ವಿಶೇಷ ಗೃಹಸಾಲ ಯೋಜನೆಯನ್ನು ಮಾರ್ಚ್‌ 31ರಿಂದ ವಿಸ್ತರಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಏತನ್ಮಧ್ಯೆ, ಎಸ್‌ಬಿಐ ಬ್ಯಾಂಕ್ ವಿಶೇಷ ಗೃಹ ಸಾಲ ಯೋಜನೆಯಡಿಯಲ್ಲಿ, ಆರಂಭಿಕ ವರ್ಷದಲ್ಲಿ ಶೇ.8ರಷ್ಟು ಬಡ್ಡಿ ದರವನ್ನು ವಿಧಿಸುತ್ತಿದ್ದು, ಎರಡನೇ ಹಾಗೂ ಮೂರನೇ ವರ್ಷದಲ್ಲಿ ಶೇ.8.5ರಷ್ಟು ಬಡ್ಡಿ ದರದಲ್ಲಿ ಹೆಚ್ಚಳವಾಗಲಿದೆ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದ ಅವಧಿಯಲ್ಲಿ, ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ 25 ಸಾವಿರ ಕೋಟಿ ರೂಪಾಯಿಗಳ ಗೃಹ ಸಾಲವನ್ನು ವಿತರಿಸಿದ್ದು, ಗರಿಷ್ಠ 71 ಸಾವಿರ ಕೋಟಿ ರೂಪಾಯಿಗಳನ್ನು ಗೃಹಸಾಲಕ್ಕಾಗಿ ಮೀಸಲಾಗಿರಿಸಲಾಗಿದೆ ಎಂದು ಬ್ಯಾಂಕ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಸ್ಬಿಐ, ಗೃಹಸಾಲ, ಆರ್ಬಿಐ, ಎಸ್ಬಿಐ