ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೋಡಾಫೋನ್‌ನಿಂದ ಐಫೋನ್ 3ಜಿಎಸ್‌ ಮಾರಾಟ (Vodafone | sell | iPhone 3GS | India | Vodafone Essar | Apple Inc)
Bookmark and Share Feedback Print
 
ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಮೂರನೇ ಸ್ಥಾನದಲ್ಲಿರುವ ವೋಡಾಫೋನ್ ನಿಯಂತ್ರಿತ ವೋಡಾಫೋನ್ ಎಸ್ಸಾರ್‌ ಕಂಪೆನಿ, ಐಪಲ್ ಕಂಪೆನಿಯ 3ಜಿಎಸ್‌ ಐಫೋನ್‌ಗಳನ್ನು ತಕ್ಷಣದಿಂದ ಮಾರಾಟವನ್ನು ಆರಂಭಿಸುತ್ತಿರುವುದಾಗಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಭಾರ್ತಿಏರ್‌ಟೆಲ್ ಕೂಡಾ, ಶುಕ್ರವಾರದಿಂದ ಐಫೋನ್ 3ಜಿಎಸ್‌ ಹ್ಯಾಂಡ್‌ಸೆಟ್‌ ಮಾರಾಟವನ್ನು ಆರಂಭಿಸಲಾಗುವುದು ಎಂದು ಹೇಳಿಕೆ ನೀಡಿತ್ತು.

ಕೆಲ ತಿಂಗಳುಗಳ ನಿರೀಕ್ಷೆಯ ನಂತರ ಐಫೋನ್ 3ಜಿಎಸ್‌ ಅಂತಿಮವಾಗಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದೆ.ಕಳೆದ ವಾರ ಏರ್‌ಟೆಲ್ ಸಂಸ್ಥೆ, ಐಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಆದರೆ ದರದ ವಿವರಗಳನ್ನು ಬಹಿರಂಗಪಡಿಸಿರಲಿಲ್ಲ.

ಇದೀಗ ಐಫೋನ್‌3ಜಿಎಸ್‌ ದರದ ವಿವರಗಳು ಲಭ್ಯವಾಗಿವೆ. ಹಳೆಯ 8ಜಿಬಿ ಆವೃತ್ತಿಯ ಐಫೋನ್ ದರವನ್ನು 29,500 ರೂ, 16ಜಿಬಿ 3ಜಿಎಸ್ ಐಫೋನ್‌ ದರವನ್ನು 35.500 ರೂ, 32ಜಿಬಿಎಸ್ ಐಫೋನ್ ದರ 41,500 ರೂಪಾಯಿಗಳಾಗಿದೆ.ಮಾರ್ಚ್ 26 ರಿಂದ ಭಾರತೀಯ ಮಾರುಕಟ್ಟೆಗಳಲ್ಲಿ ಲಭ್ಯವಾಗಲಿವೆ ಎಂದು ಏರ್‌ಟೆಲ್ ಕಂಪೆನಿಯ ಮೂಲಗಳು ತಿಳಿಸಿವೆ.

ಐಫೋನ್ ಬಳಕೆದಾರರಿಗೆ ಡಟಾ ಪ್ಲ್ಯಾನ್ ಪ್ರಕಾರ, ಹ್ಯಾಂಡ್‌ಸೆಟ್‌ಗಳನ್ನು ಏರ್‌ಟೆಲ್‌ ನೆಟ್‌ವರ್ಕ್‌ಗೆ ಲಾಕ್ ಮಾಡಲಾಗುತ್ತಿದ್ದು, ಪ್ರತಿ ತಿಂಗಳಿಗೆ 500 ಎಂಬಿಯಂತೆ ವರ್ಷದ ಅವಧಿಯವರೆಗೆ ಉಚಿತ ಡಟಾ ಒದಗಿಸಲಾಗುತ್ತಿದೆ.

ಮಾರ್ಚ್ 26 ರಿಂದ ದೇಶಾದ್ಯಂತ ಏರ್‌ಟೆಲ್‌ನ ಅಧಿಕೃತ ಮಳಿಗೆಗಳಲ್ಲಿ, ಐಫೋನ್‌3ಜಿಎಸ್ ಮೊಬೈಲ್‌ಗಳನ್ನು ಬಳಕೆದಾರರು ಖರೀದಿಸಬಹುದಾಗಿದೆ.ಹೆಚ್ಚಿನ ವಿವರಗಳಿಗಾಗಿ ಏರ್‌ಟೆಲ್ ವೆಬ್‌ಸೈಟ್ ಸಂಪರ್ಕಿಸಬಹುದಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ