ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 6.3 ಟ್ರಿಲಿಯನ್ ರೂ ತೆರಿಗೆ ಸಂಗ್ರಹದ ಗುರಿ:ಮಿತ್ರಾ (Tax collection | Revenue | Government | Direct-tax | Import tax)
Bookmark and Share Feedback Print
 
ಪ್ರಸ್ತುತ ಆರ್ಥಿಕ ವರ್ಷದ ಪರಿಷ್ಕ್ರತ ತೆರಿಗೆಯಲ್ಲಿ 6.3 ಟ್ರಿಲಿಯನ್ ರೂಪಾಯಿಗಳ ಸಂಗ್ರಹದ ಗುರಿಯನ್ನು ತಲುಪುವ ನಿರೀಕ್ಷೆಯಿದೆ ಎಂದು ಕೇಂದ್ರದ ಕಂದಾಯ ಇಲಾಖೆಯ ಕಾರ್ಯದರ್ಶಿ ಸುನೀಲ್ ಮಿತ್ರಾ ಹೇಳಿದ್ದಾರೆ.

ಪ್ರಸಕ್ತ ವರ್ಷದ ಬಜೆಟ್ ಮಂಡನೆಯ ಸಂದರ್ಭದಲ್ಲಿ, ಅಮುದು ತೆರಿಗೆ ಹಾಗೂ ಅಬಕಾರಿ ತೆರಿಗೆಯಲ್ಲಿ ಹೆಚ್ಚಳಗೊಳಿಸಿದ್ದರಿಂದ ನೇರ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಮಿತ್ರಾ ತಿಳಿಸಿದ್ದಾರೆ.

ನೇರ ತೆರಿಗೆ ಸಂಗ್ರಹದ ಗುರಿ 3.87ಟ್ರಿಲಿಯನ್‌ಗಳಾಗಿದ್ದು,ಸಂಪೂರ್ಣ ತೆರಿಗೆ ವಸೂಲಾತಿಗಾಗಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಸರಕಾರ ಮಾರ್ಚ್ 31ರೊಳಗಾಗಿ ಪರೋಕ್ಷ ತೆರಿಗೆಯಲ್ಲಿ 2.46 ಟ್ರಿಲಿಯನ್ ರೂಪಾಯಿಗಳ ಸಂಗ್ರಹ ಗುರಿಯನ್ನು ಹೊಂದಿದೆ ಎಂದು ಸುನೀಲ್ ಮಿತ್ರಾ ಹೇಳಿದ್ದಾರೆ.

ಕೇಂದ್ರ ವಿತ್ತಖಾತೆ ಸಚಿವ ಪ್ರಣಬ್ ಮುಖರ್ಜಿ, ಫೆಬ್ರವರಿ 26 ರಂದು ಬಜೆಟ್ ಮಂಡಿಸಿ ಅಮುದು ತೆರಿಗೆಯಲ್ಲಿ ಶೇ.5ರಷ್ಟು ಹೆಚ್ಚಳಗೊಳಿಸಿತ್ತು. ಅಬಕಾರಿ ತೆರಿಗೆಯಲ್ಲಿ ಕೂಡಾ ಸರಕಾರ ಹೆಚ್ಚಳ ಘೋಷಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ