ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸ್ಪೈಸ್‌ ಮೊಬೈಲ್‌ನಿಂದ ಹ್ಯಾಂಡ್‌ಸೆಟ್ ತಯಾರಿಕೆ (Spice Mobiles | Handset maker | Manufacturing | Mobile phones)
Bookmark and Share Feedback Print
 
ಹ್ಯಾಂಡ್‌ಸೆಟ್ ತಯಾರಿಕೆ ಸಂಸ್ಥೆಯಾದ ಸ್ಪೈಸ್ ಮೊಬೈಲ್, ವರ್ಷಾಂತ್ಯಕ್ಕೆ ಮೊಬೈಲ್ ಫೋನ್‌ಗಳ ಉತ್ಪಾದನೆಯನ್ನು ಆರಂಭಿಸಲಾಗುತ್ತಿದ್ದು, ಏಪ್ರಿಲ್‌ನಿಂದ ಒಂದು ಮಿಲಿಯನ್ ಮೊಬೈಲ್ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮುಂದಿನ ತಿಂಗಳಿನಿಂದ ಭಾರತದಲ್ಲಿ ಮೊಬೈಲ್ ಹ್ಯಾಂಡ್‌ಸೆಟ್‌ ತಯಾರಿಕೆ ಕುರಿತಂತೆ, ಸಿದ್ಧತೆ ನಡೆಸಲಾಗುತ್ತಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದ ಬಡ್ಡಿಯಲ್ಲಿ ಈಗಾಗಲೇ ಮೊಬೈಲ್ ಉತ್ಪಾದನೆ ಘಟಕವನ್ನು ಹೊಂದಿದ್ದು, ಮುಂದಿನ ತಿಂಗಳಿನಿಂದ ಉತ್ಪಾದನೆ ಆರಂಭಿಸಲಾಗುತ್ತಿದೆ ಎಂದು ಸ್ಪೈಸ್ ಮೊಬೈಲ್ ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕುನಾಲ್ ಆಹುಜಾ 12 ಮೆಗಾ ಪಿಕ್ಸೆಲ್‌ ಕ್ಯಾಮರಾ ಫೋನ್‌ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಎಸ್‌1200 ಮಾಡೆಲ್‌ನ ಫೋನ್‌ನಲ್ಲಿ 3ಎಕ್ಸ್‌ ಆಪ್ಟಿಕಲ್ ಝೂಮ್ ಹಾಗೂ 12-ಎಂಪಿ ಕ್ಯಾಮರಾ ಹೊಂದಿದ ಫೋನ್ ದರವನ್ನು 14,500 ರೂಪಾಯಿಗಳಿಗೆ ನಿಗದಿಪಡಿಸಲಾಗಿದೆ.ಒಂದು ತಿಂಗಳ ಅವಧಿಯಲ್ಲಿ ಒಂದು ಮಿಲಿಯನ್ ಹ್ಯಾಂಡ್‌ಸೆಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ.

ಬಿಕೆಮೋದಿ ಗ್ರೂಪ್‌ ಮಾಲೀಕತ್ವದ ಸೈಪ್ಸ್ ಮೊಬೈಲ್‌ಗೆ ಬಾಲಿವುಡ್ ನಟಿ ಹಾಗೂ ಖ್ಯಾತ ನಟ ಅನಿಲ್ ಕಪೂರ್ ಪುತ್ರಿ ಸೋನಮ್ ಕಪೂರ್ ರಾಯಭಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ

ಮೊಬೈಲ್ ಮಾರುಕಟ್ಟೆಯಲ್ಲಿ ಭಾರತದಲ್ಲಿ ಮುಂಚೂಣಿಯಲ್ಲಿರುವ ನೋಕಿಯಾ ಸಂಸ್ಥೆ,ತಮಿಳುನಾಡಿನ ಚೆನ್ನೈಯಲ್ಲಿ ಉತ್ಪಾದಕ ಘಟಕವನ್ನು ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ