ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೈಮಾನಿಕ ಕ್ಷೇತ್ರದಲ್ಲಿ ಹೂಡಿಕೆಗೆ ಅಹ್ವಾನ: ಪ್ರಫುಲ್ (Praful Patel | US investment | Aviation infra)
Bookmark and Share Feedback Print
 
ಅಮೆರಿಕದ ವಿಮಾನಯಾನ ಕಂಪೆನಿಗಳು ದೇಶಿಯ ವಿಮಾನಯಾನ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವಂತೆ ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ಅಹ್ವಾನ ನೀಡಿದ್ದಾರೆ.

ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಗ್ಯಾರಿ ಲೊಕೆ ಮತ್ತು ಸಾರಿಗೆ ಕಾರ್ಯದರ್ಶಿ ರೆ ಲಾಹೊಡ್ ಅವರನ್ನು ಭೇಟಿ ಮಾಡಿದ ಕೇಂದ್ರ ವಿಮಾನಯಾನ ಸಚಿವ ಪಟೇಲ್, ರಫ್ತು ನಿಯಂತ್ರಣದಲ್ಲಿರುವ ಕೆಲ ಅಡೆತಡೆಗಳನ್ನು ತೆಗೆಯುವಂತೆ ಮನವಿ ಮಾಡಿದ್ದಾರೆ.

ಭಾರತದ ವಿಮಾನಯಾನ ಕ್ಷೇತ್ರದ ಚೇತರಿಕೆ ಕುರಿತಂತೆ ಅಮೆರಿಕದ ವಿಮಾನಯಾನ ಕಂಪೆನಿಗಳು ಪ್ರಭಾವಿತವಾಗಿದ್ದು, ದೇಶದ ವೈಮಾನಿಕ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಸಮ್ಮತಿಸಿವೆ ಎಂದು ಮೂಲಗಳು ತಿಳಿಸಿವೆ.

ಅಮೆರಿಕದ ಕಂಪೆನಿಗಳು ಭಾರತಕ್ಕೆ ಕೇವಲ ರಫ್ತು ಮಾಡುವುದನ್ನು ಹೊರತುಪಡಿಸಿ, ದೇಶದ ವಿಮಾನಯಾನ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಮೂಲಕ ದೀರ್ಘಾವಧಿಯ ಬದ್ಧತೆಯನ್ನು ಪ್ರದರ್ಶಿಸಬೇಕು ಎಂದು ಸಚಿವ ಪಟೇಲ್ ಕರೆ ನೀಡಿದ್ದಾರೆ.

ಅಮೆರಿಕದ ಉಭಯ ಕಾರ್ಯದರ್ಶಿಗಳನ್ನು ಭಾರತಕ್ಕೆ ಅಹ್ವಾನಿಸಿದ ಪಟೇಲ್, ವಿಮಾನಯಾನ ಕ್ಷೇತ್ರದ ಬೆಳವಣಿಗೆಗಳನ್ನು ಹಾಗೂ ಅವಕಾಶಗಳನ್ನು ವೀಕ್ಷಿಸುವಂತೆ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ