ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಷ್ಯಾದ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮಿತ್ತಲ್‌ಗೆ ಅಗ್ರಸ್ಥಾನ (Lakshmi Mittal| Richest Asian in Britain|NRI steel baron)
Bookmark and Share Feedback Print
 
PTI
ವಿಶ್ವದ ಬೃಹತ್ ಉಕ್ಕು ತಯಾರಿಕೆ ಕಂಪೆನಿ ಅರ್ಸೆಲ್ ಮಿತ್ತಲ್ ಮಾಲೀಕರಾದ ಲಕ್ಷ್ಮಿ ಮಿತ್ತಲ್, 17 ಬಿಲಿಯನ್ ಪೌಂಡ್‌ ಸಂಪತ್ತಿನೊಂದಿಗೆ 2010ರ ಬ್ರಿಟನ್‌ನಲ್ಲಿರುವ ಏಷ್ಯಾದ ಶ್ರೀಮಂತ ಉದ್ಯಮಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ.

ಏಷ್ಯನ್ ಮೀಡಿಯಾ ಆಂಡ್ ಮಾರ್ಕೆಟಿಂಗ್ ಗ್ರೂಪ್‌ನ ಈಸ್ಟರ್ನ್ ಐ ಸಂಸ್ಥೆ ಪ್ರಕಟಿಸಿದ 2010ರ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ,59 ವರ್ಷದ ಮಿತ್ತಲ್ ಅಗ್ರಸ್ಥಾನದಲ್ಲಿದ್ದು, ಹಿಂದೂಜಾ ಸಹೋದರರಾದ ಶ್ರೀಚಂದ್ ಮತ್ತು ಗೋಪಿ ಚಂದ್ 8ಬಿಲಿಯನ್ ಪೌಂಡ್‌ ಸಂಪತ್ತಿನೊಂದಿಗೆ ನಂತರದ ಸ್ಥಾನವನ್ನು ಪಡೆದಿದ್ದಾರೆ.

ಗಣಿಗಾರಿಕೆ ಕಂಪೆನಿಯಾದ ವೆದಾಂತಾ ರಿಸೊರ್ಸೆಸ್‌ ಕಂಪೆನಿಯ ಮಾಲೀಕರಾದ ಅನಿಲ್ ಅಗರ್‌ವಾಲ್ 4 ಬಿಲಿಯನ್ ಪೌಂಡ್‌ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.ಬೆಸ್ಟ್‌ವೇಸ್ ಕಂಪೆನಿಯ ಮಾಲೀಕರಾದ ಸರ್ ಅನ್ವರ್ ಪರ್ವೇಜ್ 715 ಮಿಲಿಯನ್ ಪೌಂಡ್‌ ಸಂಪತ್ತಿನೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.ಐದನೇ ಸ್ಥಾನದಲ್ಲಿರುವ ಅನಿವಾಸಿ ಭಾರತೀಯ ಉದ್ಯಮಿ ಸ್ವರಾಜ್ ಪೌಲ್ 510 ಮಿಲಿಯನ್ ಪೌಂಡ್ ಸಂಪತ್ತು ಹೊಂದಿದ್ದಾರೆ.

ನಗರದ ಪಂಚತಾರಾ ಸೊಫಿಟೆಲ್ ಹೋಟೆಲ್‌ನಲ್ಲಿ ಶ್ರೀಮಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಹಿಂದೂಜಾ ಸಹೋದರರಾದ ಎಸ್‌.ಪಿ.ಹಿಂದೂಜಾ ಮತ್ತು ಜಿ.ಪಿ. ಹಿಂದೂಜಾ ಹಾಗೂ ಹಿಂದೂಜಾ ಗ್ರೂಪ್‌ನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು 'ಜೀವಮಾನ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಿತ್ತಲ್ ಅರ್ಸೆಲ್ ಮಿತ್ತಲ್ ಕಂಪೆನಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಅಧ್ಯಕ್ಷರಾಗಿದ್ದಾರೆ. ಅವರ ಪುತ್ರ ಆದಿತ್ಯ ಮಿತ್ತಲ್, ಕಂಪೆನಿಯ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದಾರೆ. 2004ರಲ್ಲಿ ಮಿತ್ತಲ್ ಮಗಳು ವನಿಷಾ ಮದುವೆಗೆ 10-20 ಮಿಲಿಯನ್ ಪೌಂಡ್ ವೆಚ್ಚ ಮಾಡಿದ ನಂತರ, ವನಿಷಾ ಭಾರಿ ಪ್ರಚಾರವನ್ನು ಪಡೆದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ