ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರಿಂಡಿಯಾ ಸಿಬ್ಬಂದಿ ವೇತನ ಮುಂದೂಡಿಕೆ (Air India| Salary | Worsen)
Bookmark and Share Feedback Print
 
ದೇಶದ ಪ್ರತಿಷ್ಠಿತ ವಿಮಾನಯಾನ ಸಂಸ್ಥೆಯಾದ ಏರಿಂಡಿಯಾ ಆರ್ಥಿಕ ಸ್ಥಿತಿ ಹದಗೆಡುತ್ತಾ ಸಾಗಿದೆ.ಇದೀಗ ಸರಿಯಾದ ಸಮಯಕ್ಕೆ ಸಿಬ್ಬಂದಿಗಳಿಗೆ ವೇತನ ನೀಡದಂತಹ ಪರಿಸ್ಥಿತಿ ಎದುರಾಗಿದೆ.ಏರಿಂಡಿಯಾ ಸಂಸ್ಥೆ ಸಿಬ್ಬಂದಿಗಳ ಮಾರ್ಚ್ ತಿಂಗಳ ವೇತನವನ್ನು ಏಪ್ರಿಲ್‌ 7 ರಂದು ಪಾವತಿಸುವುದಾಗಿ ಹೇಳಿಕೆ ನೀಡಿದೆ.

ಕಳೆದ 2009ರ ಜೂನ್ ತಿಂಗಳ ಅವಧಿಯಲ್ಲಿ ಕೂಡಾ ಹಣಕಾಸಿನ ತೊಂದರೆಯಿಂದಾಗಿ ವೇತನ ಪಾವತಿಯಲ್ಲಿ 15 ದಿನಗಳ ವಿಳಂಬ ನೀತಿಯನ್ನು ತೋರಿತ್ತು. ಇದೀಗ ಎರಡನೇ ಬಾರಿ ಮಾರ್ಚ್ ತಿಂಗಳ ವೇತನವನ್ನು ಏಪ್ರಿಲ್‌ ತಿಂಗಳಲ್ಲಿ ನೀಡುವುದಾಗಿ ಹೇಳಿಕೆ ನೀಡಿರುವುದು ಸಿಬ್ಬಂದಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಏರಿಂಡಿಯ ಸಂಸ್ಥೆಯ ಹೂಡಿಕೆ ಬಂಡವಾಳ 16,000 ಕೋಟಿ ರೂಪಾಯಿಗಳಿಗೆ ತಲುಪಿದೆ. ಪ್ರಸಕ್ತ ಆರ್ಥಿಕ ವರ್ಷದ ಅವಧಿಯಲ್ಲಿ 7200 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.2007ರಲ್ಲಿ 6,550 ಕೋಟಿ ರೂಪಾಯಿಗಳ ನಷ್ಟವನ್ನು ಭರಿಸಬೇಕಾಗಿರುವುದರಿಂದ ಆರ್ಥಿಕ ಮುಗ್ಗಟ್ಟನು ಎದುರಿಸುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ