ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಮೆರಿಕದ ಆರ್ಥಿಕತೆಯಲ್ಲಿ ನಿಧಾನಗತಿಯ ಚೇತರಿಕೆ (US economy | Quarter | Business | Government)
Bookmark and Share Feedback Print
 
ಜಾಗತಿಕ ಆರ್ಥಿಕ ಕುಸಿತದ ಮಧ್ಯೆಯು ಅಮೆರಿಕದ ಆರ್ಥಿಕತೆ ಕೊನೆಯ ತ್ರೈಮಾಸಿಕ ಅವಧಿಯಲ್ಲಿ ನಿರೀಕ್ಷೆಗಿಂತ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಜಾಗತಿಕ ಆರ್ಥಿಕತೆಯಲ್ಲಿ ಬಲಾಢ್ಯರಾಷ್ಟ್ರವಾದ ಅಮೆರಿಕ, ಅಕ್ಟೋಬರ್-ಡಿಸೆಂಬರ್ ತಿಂಗಳ ಅವಧಿಯಲ್ಲಿ, ಆರ್ಥಿಕತೆ ಶೇ.5.6ರಷ್ಟು ಏರಿಕೆ ಕಂಡಿದೆ ಎಂದು ವಾಣಿಜ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.5.9ಕ್ಕೆ ತಪುವ ಸಾಧ್ಯತೆಗಳಿವೆ ಎಂದು ಸರಕಾರ ಈ ಮೊದಲು ಹೇಳಿಕೆ ನೀಡಿತ್ತು.

ಪ್ರಸಕ್ತ ವರ್ಷದ ಕೊನೆಯ ತ್ರೈಮಾಸಿಕ ಅವಧಿಯಲ್ಲಿ, ಆರ್ಥಿಕ ವೃದ್ಧಿ ದರ ಶೇ.5.9ಕ್ಕೆ ತಲುಪಲಿದೆ ಎಂದು ಆರ್ಥಿಕ ತಜ್ಞರು ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ.

ಡಿಸೆಂಬರ್ 2007ರಲ್ಲಿ ಎದುರಾದ ಜಾಗತಿಕ ಆರ್ಥಿಕ ಕುಸಿತದ ನಂತರ, ಅಮೆರಿಕದ ಆರ್ಥಿಕತೆ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಮಾತ್ರ ಚೇತರಿಕೆ ಕಾಣಲು ಆರಂಭಿಸಿದೆ ಎಂದು ಆರ್ಥಿಕ ತಜ್ಞರು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ