ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಹಾರ ದರಗಳ ಇಳಿಕೆಯಿಂದ ಹಣದುಬ್ಬರ ಕುಸಿತ (Montek Singh Ahluwalia | Planning Commission | Inflation | Food prices)
Bookmark and Share Feedback Print
 
ಅಹಾರ ಧಾನ್ಯ ದರಗಳಲ್ಲಿ ಇಳಿಕೆಯಾಗುತ್ತಿರುವುದರಿಂದ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಹಣದುಬ್ಬರ ಇಳಿಕೆಯಾಗಲಿದೆ, ಅಹಾರೇತರ ವಸ್ತುಗಳಿಗೆ ಹಣದುಬ್ಬರ ಹರಡುವ ವರದಿಯನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ತಳ್ಳಿಹಾಕಿದ್ದಾರೆ.

ಹಣದುಬ್ಬರ ದರ ಅಹಾರೇತರ ವಸ್ತುಗಳಿಗೆ ವಿಸ್ತರಿಸುತ್ತದೆ ಎಂದು ನಾನು ಭಾವಿಸುವುದಿಲ್ಲ.ಮುಂದಿನ ಮೂರು ತಿಂಗಳ ಅವಧಿಯಲ್ಲಿ ಅಹಾರ ದರಗಳು ಇಳಿಕೆಯಾಗುತ್ತಿವೆ.ಹಣದುಬ್ಬರ ದರ ಎರಡಂಕಿಗೆ ತಲುಪುವ ಸಾಧ್ಯತೆಗಳು ತೀರಾ ಕಡಿಮೆಯಾಗಿವೆ ಎಂದು ತಿಳಿಸಿದ್ದಾರೆ.

ಅಹಾರ ಧಾನ್ಯಗಳ ದರಗಳು ಇಳಿಕೆಯಾಗುತ್ತಿರುವುದರಿಂದ, ಅಹಾರೇತರ ವಸ್ತುಗಳಿಗೆ ಹಣದುಬ್ಬರ ವಿಸ್ತರಿಸುವುದಿಲ್ಲ ಎಂದು ಮೊಂಟೆಕ್ ಹೇಳಿದ್ದಾರೆ.

ಅಹಾರ ಹಣದುಬ್ಬರ ದರ ಮಾರ್ಚ್ 13ಕ್ಕೆ ವಾರಂತ್ಯಗೊಂಡಂತೆ ಶೇ.16.30ದಿಂದ ಶೇ.16.22ಕ್ಕೆ ಇಳಿಕೆಯಾಗಿದೆ. ಫೆಬ್ರವರಿ ತಿಂಗಳ ಅವಧಿಯಲ್ಲಿ ಒಟ್ಟಾರೆ ಹಣದುಬ್ಬರ ದರ ಷೇ.9.89ಕ್ಕೆ ತಲುಪಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ