ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಾಳೆ ರಿಲಯನ್ಸ್‌ನಿಂದ ರಿಲಯನ್ಸ್‌ಗೆ ಉಚಿತ ಕರೆ ಅವಕಾಶ (RCom | Offer | Free talk-time | Telecom | Subscriber)
Bookmark and Share Feedback Print
 
PTI
100 ಮಿಲಿಯನ್ ಗ್ರಾಹಕರ ಗುರಿಯನ್ನು ತಲುಪಿದ ರಿಲಯನ್ಸ್ ಕಮ್ಯೂನಿಕೇಶನ್ಸ್, ಸಂಭ್ರಮಾಚರಣೆಯ ನಿಮಿತ್ಯ ಮಾರ್ಚ್ 28 ರಂದು ಗ್ರಾಹಕರಿಗೆ ಉಚಿತ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳ ಸುವರ್ಣಾವಕಾಶ ನೀಡಿದೆ.

ಕಂಪೆನಿಯ ಆಫರ್ ಅನ್ವಯ, ರಿಲಯನ್ಸ್ ಗ್ರಾಹಕರು ಮಾರ್ಚ್ 28 ರಂದು, ರಿಲಯನ್ಸ್‌ ನೆಟ್‌ವರ್ಕ್‌ಗೆ 24 ಗಂಟೆಗಳ ಅವಧಿಗೆ ಉಚಿತವಾಗಿ ಸ್ಥಳೀಯ ಹಾಗೂ ಎಸ್‌ಟಿಡಿ ಕರೆಗಳನ್ನು ಮಾಡಬಹುದಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ರಿಲಯನ್ಸ್‌ನ ಸಿಡಿಎಂಎ, ಜಿಎಸ್‌ಎಂ ಮತ್ತು ಹಲೋ ಸೇವೆಗಳನ್ನು ಪಡೆಯುತ್ತಿರುವ ಅಸ್ತಿತ್ವದಲ್ಲಿರುವ ಗ್ರಾಹಕರು ಹಾಗೂ ನೂತನ ಗ್ರಾಹಕರು ಕೂಡಾ ಒಂದು ದಿನ ಉಚಿತವಾಗಿ ರಿಲಯನ್ಸ್ ನೆಟ್‌ವರ್ಕ್‌ಗೆ ಕರೆಮಾಡಬಹುದಾಗಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಗ್ರಾಹಕರು ನಮ್ಮ ಮೇಲೆ ತೋರಿದ ವಿಶ್ವಾಸದಿಂದಾಗಿ 100 ಮಿಲಿಯನ್ ಗ್ರಾಹಕರನ್ನು ಹೊಂದಲು ಸಾಧ್ಯವಾಗಿದೆ. ಆದ್ದರಿಂದ ಗ್ರಾಹಕರಿಗೆ 24 ಗಟೆಗಳ ಉಚಿತ ಕರೆ ಮಾಡುವ ಅವಕಾಶವನ್ನು ಒದಗಿಸಲಾಗಿದೆ ಎಂದು ರಿಲಯನ್ಸ್ ಕಮ್ಯೂನಿಕೇಶನ್ಸ್ ಅಧ್ಯಕ್ಷ ಮಹೇಶ್ ಪ್ರಸಾದ್ ತಿಳಿಸಿದ್ದಾರೆ.

ಕಳೆದ ತಿಂಗಳು, ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ 100 ಮಿಲಿಯನ್ ಗ್ರಾಹಕರನ್ನು ಹೊಂದಿದ, ದೇಶದಲ್ಲಿ ಪ್ರಮುಖ ಎರಡನೇ ಟೆಲಿಕಾಂ ಕಂಪೆನಿ ಹಾಗೂ ವಿಶ್ವದಲ್ಲಿ ನಾಲ್ಕನೇ ಕಂಪೆನಿಯ ಸ್ಥಾನವನ್ನು ಪಡೆದಿತ್ತು.

ರಿಲಯನ್ಸ್ ಕಮ್ಯೂನಿಕೇಶನ್ಸ್ ಸಂಸ್ಥೆ, ಮುಂದಿನ 1000 ದಿನಗಳಲ್ಲಿ ಮತ್ತೆ 100 ಮಿಲಿಯನ್ ಗ್ರಾಹಕರ ಗುರಿಯನ್ನು ಹೊಂದಲಾಗಿದೆ ಎಂದು ಕಂಪೆನಿಯ ಅಧ್ಯಕ್ಷ ಪ್ರಸಾದ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ