ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಯಾಣ ದರದಲ್ಲಿ ಹೆಚ್ಚಳವಿಲ್ಲ: ಪವನ್ ಹಂಸ್ ಕಂಪನಿ (Pavan Hamsa | UPA | R.k.Thyagi | Congess | Helicaptor)
Bookmark and Share Feedback Print
 
ಇತ್ತೀಚೆಗೆ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಹೆಚ್ಚಿಸಿದ ನಂತರವೂ, ಪ್ರಮುಖ ಯಾತ್ರಾ ಸ್ಥಳಗಳಿಗೆ ಹೊರಡುವ ಪ್ರಯಾಣ ದರವನ್ನು ಏರಿಸುವುದಿಲ್ಲ ಎಂದು ಹೆಲಿಕಾಪ್ಟರ್ ಸೇವೆ ನೀಡುವ ಸರ್ಕಾರಿ ಸ್ವಾಮ್ಯದ ಕಂಪನಿ ಪವನ್ ಹಂಸ ತಿಳಿಸಿದೆ.

ದೆಹಲಿಯಿಂದ ವೈಷ್ಣೋ ದೇವಿಗೆ ಹೊರಡುವ ಪ್ರಯಾಣದ ದರ 2450ರೂ. ಹಾಗೂ ಕೇದಾರನಾಥ್‌ಗೆ 7ಸಾವಿರ ರೂಪಾಯಿ ದರ ಇದ್ದು,ಈ ದರದಲ್ಲಿ ಯಾವುದೇ ಹೆಚ್ಚಳ ಮಾಡುವುದಿಲ್ಲ ಎಂದು ಕಂಪನಿಯ ಅಧ್ಯಕ್ಷ ಆರ್.ಕೆ.ತ್ಯಾಗಿ ಹೇಳಿದ್ದಾರೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ಹೆಚ್ಚಿಸಿದ ನಂತರ, ಹಲವು ಕಂಪನಿಗಳು, ಪ್ರಯಾಣ ದರ ಹೆಚ್ಚಳ ಅನಿವಾರ್ಯ ಎಂದು ವಿವಿಧ ಕಂಪನಿಗಳು ತಿಳಿಸಿದ್ದವು, ಆದರೆ ಪವನ್ ಹಂಸ ಕಂಪನಿ ಮಾತ್ರ ಸದ್ಯಕ್ಕೆ ಪ್ರಯಾಣ ದರ ಹೆಚ್ಚಳ ಮಾಡುವುದಿಲ್ಲ ಎಂದು ಘೋಷಿಸುವ ಮೂಲಕ ಪ್ರಯಾಣಿಕರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದೆ.

ಅಲ್ಲದೇ, ಇಲ್ಲಿಗೆ ಹತ್ತಿರದ ಆಶ್ರಮಧಾಮ ಬಳಿ ನಿರ್ಮಿಸಲಾಗುತ್ತಿರುವ ಏಷ್ಯಾ ಕ್ರೀಡಾಕೂಟ ಗ್ರಾಮದ ಸಮೀಪ ಮತ್ತೊಂದು ಹೆಲಿಪ್ಯಾಡ್ ನಿರ್ಮಿಸುವಂತೆ ದೆಹಲಿ ಅಭಿವೃದ್ಧಿ ಪ್ರಾಧಿಕಾರ 1.92ಕೋಟಿ ರೂ. ಹಣ ನೀಡಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ