ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ನಿಸಾನ್‌ನಿಂದ ಸಣ್ಣ ಕಾರು ಉತ್ಪಾದನಾ ಘಟಕ (Nissan Motors | Nissan India)
Bookmark and Share Feedback Print
 
ಜಪಾನಿನ ನಿಸಾನ್ ಮೋಟಾರ್ಸ್ ತನ್ನ ಹೊಸ ಸಣ್ಣ ಕಾರು ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಉದ್ದೇಶಿಸಿದೆ. ನಿಸಾನ್‌ನ ಈ ಉದ್ದೇಶಿತ ಕಾರು 2.5 ಲಕ್ಷ ರೂಪಾಯಿಗಳ ಸಣ್ಣ ಕಾರಾಗಿದೆ.

ನಿಸಾನ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಿಮಿನೋಬು ಟೋಕ್ಯುಯಾಮಾ ಈ ಬಗ್ಗೆ ಮಾತನಾಡುತ್ತಾ, ಮಾರುತಿ ಆಲ್ಟೋ ಮಾದರಿಯ ಹೊಸ ಕಾರನ್ನು ನಿಸಾನ್ ಕೂಡಾ ಬಿಡುಗಡೆ ಮಾಡಲಿದೆ. ಹಿಂದೂಜಾ ಗ್ರೂಪ್ ಕಂಪನಿ ಅಶೋಕ್ ಲೇಲ್ಯಾಂಡ್ ಈ ನಿಸಾನ್ ಕಂಪನಿಯ ಭಾರತದ ಉತ್ಪಾದನಾ ಘಟಕದ ಪಾರ್ಟ್‌ನರ್ ಆಗಲಿದೆ ಎಂದು ತಿಳಿಸಿದರು.

ನಿಸಾನ್ ಭಾರತದಲ್ಲಿ ಮಿಕ್ರಾ ಎಂಬ ಸಣ್ಣ ಕಾರನ್ನು ತನ್ನ ಚೆನ್ನೈ ಕಾರು ಉತ್ಪಾದಕಾ ಘಟಕದಿಂದ ಬಿಡುಗಡೆ ಮಾಡಲಿದೆ. ಆದರೆ ರೆನಾಲ್ಟ್ ಕಂಪನಿ ನಿಸಾನ್‌ನ ಮಾರುಕಟ್ಟೆ ವಿಭಾಗದ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ಇದು ಕಾರಿನ ಮಾರಾಟದ ಜವಾಬ್ದಾರಿಯನ್ನು ವಹಿಸಲಿದೆ ಎಂದು ತಿಳಿಸಿದರು.

ನಿಸಾನ್ ಈಗಾಗಲೇ ರೆನಾಲ್ಟ್, ಬಾಜಾಜ್ ಆಟೋ ಕಂಪನಿಗಳ ಜೊತೆ ಒಪ್ಪಂದವನ್ನು ಮಾಡಿಕೊಂಡಿದ್ದು, ಅಶೋಕ್ ಲೇಲ್ಯಾಂಡ್ ಜೊತೆಗೂ ಒಪ್ಪಂದ ಮಾಡಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿಸಾನ್ ಮೋಟಾರ್ಸ್, ಕಾರು