ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ಜೊತೆ ಆಕ್ಸಿಸ್ ಬ್ಯಾಂಕ್ ಒಪ್ಪಂದ (Axis Bank, Max New York Life)
Bookmark and Share Feedback Print
 
ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ ಇದೀಗ ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ಕಂಪನಿ ಜೊತೆಗೆ ಶೇ.5ರಷ್ಟು ಷೇರು ಹೂಡುವ ಬಗ್ಗ ಚಿಂತನೆ ನಡೆಸಿದೆ ಎಂದುಆಕ್ಸಿಸ್ ಬ್ಯಾಂಕ್ ಅವರ ಕಾರ್ಯಕಾರಿ ನಿರ್ದೇಶಕ ಎಸ್.ಸೇನ್‌ಗುಪ್ತಾ ಹೇಳಿದ್ದಾರೆ.

ನಾವು ಈಗಾಗಲೇ ಮ್ಯಾಕ್ಸ್ ನ್ಯೂಯಾರ್ಕ್ ಲೈಫ್ ಸಂಸ್ಥೆಯ ಜೊತೆಗೆ ಮಾತುಕತೆ ನಡೆಸಿದ್ದು, ಶೇ.5ರಷ್ಟು ಷೇರು ಹೂಡುವ ಬಗ್ಗೆ ಚರ್ಚಿಸಿದ್ದೇವೆ ಎಂದು ಅವರು ವಿವರಿಸಿದರು.

ವಿಮೆ ವಿಭಾಗದಲ್ಲಿ ನಾವು ಈ ಷೇರುಗಳನ್ನು ಹೂಡುತ್ತಿದ್ದು, ಈ ಬಗ್ಗೆ ಶೀಘ್ರದಲ್ಲಿಯೇ ಒಪ್ಪಂದ ನಡೆಯಲಿದೆ. ಮ್ಯಾಕ್ಸ್ ನ್ಯೂಯಾರ್ಕ್ ಸದ್ಯ ಭಾರತದ ಭರವಸೆಯ ವಿಮಾ ಕಂಪನಿಯಾಗಿ ಬೆಳೆಯುತ್ತಿದೆ. ಸದ್ಯಕ್ಕೆ ಈ ಷೇರು ಸಣ್ಣ ಮೊತ್ತವಾಗಿದ್ದರೂ, ಈ ಸಂಬಂಧ ನಮ್ಮ ನಡುವೆ ಭದ್ರ ಬುನಾದಿಗೆ ನಾಂದಿಯಾಗಲಿದೆ ಎಂದು ಅವರು ತಿಳಿಸಿದರು.
ಸಂಬಂಧಿತ ಮಾಹಿತಿ ಹುಡುಕಿ