ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್ಥಿಕ ವೃದ್ಧಿ ದರ ಶೇ.7.4ಕ್ಕೆ ವಿಸ್ತರಣೆ :ಅಸೋಚಾಮ್ (Economy | Assocham | Domestic industry | GDP | Economic slowdown)
Bookmark and Share Feedback Print
 
ಅಂತಿಮ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕತೆಯಲ್ಲಿ ಚೇತರಿಕೆಯಾಗುವ ಸಂಕೇತಗಳಿರುವುದರಿಂದ ಜಿಡಿಪಿ ದರ ಶೇ.7.4ಕ್ಕೆ ತಲುಪುವ ಸಾಧ್ಯತೆಗಳಿವೆ ಎಂದು ಕೈಗಾರಿಕೋದ್ಯಮ ಸಂಘಟನೆ ಅಸೋಚಾಮ್ ಹೇಳಿಕೆಯಲ್ಲಿ ತಿಳಿಸಿದೆ.

ಉತ್ಪಾದಕ ಕ್ಷೇತ್ರದ ಚೇತರಿಕೆ ಹಾಗೂ ದೇಶಿಯ ಕೈಗಾರಿಕೋದ್ಯಮ ವಹಿವಾಟಿನ ಏರಿಕೆಯಿಂದಾಗಿ, ಜನೆವರಿಯಿಂದ ಮಾರ್ಚ್ ತಿಂಗಳ ಅವಧಿಯಲ್ಲಿ ಜಿಡಿಪಿ ದರ ಶೇ.8ಕ್ಕೆ ವಿಸ್ತರಿಸುವ ನಿರೀಕ್ಷೆಯಿದೆ ಎಂದು ಅಸೋಚಾಮ್ ಹೊರಡಿಸಿದ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ಆರ್ಥಿಕ ವೃದ್ಧಿ ದರ ಪ್ರಸ್ತುತ ಆರ್ಥಿಕ ವರ್ಷದ ಅಂತ್ಯಕ್ಕೆ ಶೇ.7.2ರಿಂದ ಶೇ.7.4ಕ್ಕೆ ಅಂತ್ಯಗೊಳ್ಳಲಿದೆ ಎಂದು ಅಸೋಚಾಮ್ ಅಧ್ಯಕ್ಷೆ ಸ್ವಾತಿ ಪಿರಾಮಲ್ ಹೇಳಿದ್ದಾರೆ.

ಕೃಷಿ ಉತ್ಪನ್ನ ಕೊರತೆಯಿಂದಾಗಿ, ಅಕ್ಟೋಬರ್-ಡಿಸೆಂಬರ್ ತಿಂಗಳ ತ್ರೈಮಾಸಿಕ ಅವಧಿಯಲ್ಲಿ ಜಿಡಿಪಿ ದರ ಶೇ.6ಕ್ಕೆ ಇಳಿಕೆ ಕಂಡಿತು.ನಂತರ ವರ್ಷದ ಮೊದಲಾರ್ಧದಲ್ಲಿ ಜಿಡಿಪಿ ದರ ಶೇ.7ಕ್ಕೆ ವಿಸ್ತರಣೆಯಾಗಿತ್ತು.

ಸತತ ಮೂರು ವರ್ಷಗಳಿಗೆ ಶೇ.9ರಷ್ಟು ಜಿಡಿಪಿ ದರವನ್ನು ಕಂಡಿದ್ದ ದೇಶದ ಆರ್ಥಿಕತೆ, ಜಾಗತಿಕ ಆರ್ಥಿಕ ಕುಸಿತದಿಂದಾಗಿ 2008-09ರ ಅವಧಿಯಲ್ಲಿ ಶೇ.6.7ಕ್ಕೆ ಕುಸಿತ ಕಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ